ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಬಳ್ಳಾರಿ:ಆ (07)ರಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚಾ ಬಳ್ಳಾರಿ ಜಿಲ್ಲೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಮಾಜಿ ಶಾಸಕ ಸೋಮಶ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ ಕಳೆದ ನಮ್ಮ ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಹಲವಾರು ರೈತಪರ ಯೋಜನೆಗಳನ್ನು ಕೈಬಿಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದರು. ನಂತರ ರೈತರು ದೇಶದ ಬೆನ್ನೆಲುಬು ಆಗಿದ್ದಾರೆ, ಈ ರೈತರು ಬೆಳೆದಿರುವಂತಹ ಬೆಳಗಳಿಗೆ ನಿಗದಿತವಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ದಿನನಿತ್ಯದಲ್ಲಿ ಬಳಸುವಂತಹ ತರಕಾರಿ ಕಿರಣಿ ಸಾಮಾನುಗಳು ಬೇಳೆ ಎಣ್ಣೆ ಪ್ರತಿಯೊಂದು ವಸ್ತು, ದಿನನಿತ್ಯದಲ್ಲಿ ಬಳಸುವಂತಹ ಸಾಮಗ್ರಿಗಳ ಬೆಲೆ ಗಗನಕೇರಿದೆ, ಈ ಕಾಂಗ್ರೆಸ್ ಸರ್ಕಾರವು ರೈತರನ್ನು ಕಡೆಗಣಿಸಿದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಗೋನಾಳು ಮುರಹರಗೌಡರವರು, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗುರುಲಿಂಗನಗೌಡ, ಬಳ್ಳಾರಿ ನಗರದ ಮಾಜಿ ಶಾಸಕರಾದ ಜಿ ಸೋಮಶೇಖರ ರೆಡ್ಡಿ, ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ, ಶ್ರೀನಿವಾಸ್ ಮೋತ್ಕರ್ ಹಿರಿಯ ಮುಖಂಡರಾದ ರಾಮಲಿಂಗಪ್ಪ, ಯರ್ರಂಗಳಿ ತಿಮ್ಮರೆಡ್ಡಿ , ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಪ್ರಕಾಶ್ ಗೌಡರವರು, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮದಿರೆ ಕುಮಾರಸ್ವಾಮಿ, ಪುರುಷೋತ್ತಮ, ಮಾಜಿ ರೈತ ಮೋರ್ಚಾ ಅಧ್ಯಕ್ಷರಾದ ಐನಾಥ್ ರೆಡ್ಡಿ , ಜಿಲ್ಲಾ ಪದಾಧಿಕಾರಿಗಳು, ಮಂಡಲದ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಮುಖಂಡರು ಎಲ್ಲಾರೂ ಭಾಗವಹಿಸಿದರು.