ಐತಿಹಾಸಿಕ ಕಲ್ಯಾಣಿಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಅಮೀನ್ ಅತ್ತಾರ
ಲೋಕದರ್ಶನ ವರದಿ
ಕುಷ್ಟಗಿ 11: ಗ್ರಾಮೀಣ ಭಾಗದ ಕಲ್ಯಾಣಿಗಳು ತಮ್ಮದೆ ಆದ ವಿಶೇಷ ಹಿನ್ನಲೆಯನ್ನು ಹೊಂದಿರುತ್ತವೆ ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಎಂದು ಜಿಲ್ಲಾ ಪಂಚಾಯತಿಯ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ ಹೇಳಿದರು.
ತಾಲೂಕಿನ ಹಿರೇಬನ್ನಿಗೊಳ ಗ್ರಾಮ ಪಂಚಾಯತಿಯ ಹಿರೇಬನ್ನಿಗೊಳ ಗ್ರಾಮದ ಹನಮಂತ ದೇವಸ್ಥಾನ ಹತ್ತಿರದ ಕಲ್ಯಾಣಿಯನ್ನು ಸ್ವಚ್ಛ ಭಾರತ ಅಭಿಯಾನದಡಿ ಚಿಲುಮೆ-2 ಪ್ರಯುಕ್ತ ಸ್ವಚ್ಛ ಶುಕ್ರವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯತಿಯ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ ಚಾಲನೆ ನೀಡಿ ಮಾತನಾಡಿದ ಅವರು
ಗ್ರಾಮೀಣ ಭಾಗದ ಕಲ್ಯಾಣಿಗಳು ಐತಿಹಾಸಿಕ ಪುರಾವೆಯನ್ನು ಹೊಂದಿದ್ದು ಅವುಗಳು ಗ್ರಾಮದ ಜನರಿಗೆ ಕುಡಿಯುವ ನೀರಿನ ದಾಹವನ್ನು ನಿಗಿಸುತ್ತಿವೆ. ಆ ದಿಸೆಯಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಕಲ್ಯಾಣಿಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ದಿಪಡಿಸುವ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ.
ಹಿಂದೆ ಕಲ್ಯಾಣಿಗಳಲ್ಲಿದ್ದ ನೀರಿನಿಂದಲೆ ದೇವಾಲಯದ ವಿಗ್ರಹಗಳ ಅಭಿಷೇಕ, ಸ್ವಚ್ಛತಾಕಾರ್ಯದಿಗಳು ನಡೆಯುತ್ತಿದ್ದವು. ಈಗಲೂ ಸಹ ಸಾಕಷ್ಟು ದೇವಾಲಯಗಳಲ್ಲಿ ಇದು ಇನ್ನೂ ಚಾಲ್ತಿಯಲ್ಲಿದೆ. ಈ ಕಲ್ಯಾಣಿಗಳು ಭಾರತೀಯ ದೇವಾಲಯ ವಾಸ್ತು ಶಿಲ್ಪವನ್ನು ಅವಲೋಕಿಸಿದಾಗ ಇವು ದೇವಾಲಯ ಸಂಕೀರ್ಣಗಳ ಅವಿಭಾಜ್ಯ ಅಂಗಗಳೆಂದು ತಿಳಿದು ಬರುತ್ತವೆ.
ಹಲವು ಕಲ್ಯಾಣಿಗಳು ತಮ್ಮದೆ ಆದ ವಿಶೇಷ ಹಿನ್ನಲೆಯನ್ನು ಹೊಂದಿರುತ್ತವೆ. ಇನ್ನೂ ಕೆಲವು ಕಲ್ಯಾಣಿಗಳು ವಿಶೇಷ ವ್ಯಕ್ತಿಗಳಿಗೆ ಮುಡಿಪಾಗಿ ರೂಪಗೊಂಡಿರುತ್ತವೆ. ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಈ ಕಲ್ಯಾಣಿಗಳು, ಸರೋವರಗಳು, ಪುಷ್ಕರಣಿಗಳು ಒಂದು ಕುತೂಹಲಕರ ರಚನೆಗಳಾಗಿ ಜನರನ್ನು ಆಕಷರ್ಿಸುತ್ತವೆ ಎಂದು ಹೇಳಿದರು.
ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಪ್ಪ ಸುಬೇದಾರ್ ಮಾತನಾಡಿ 20-25 ವರ್ಷಗಳ ಹಿಂದೆ ಗ್ರಾಮಗಳಲ್ಲಿ ಬಾವಿಗಳ ನೀರನ್ನು ಕುಡಿದು ಆರೋಗ್ಯವಂತರಾಗಿರುತ್ತಿದ್ದರು. ಆದರೆ ಈಗ ಗಿಡ ಮರಗಳನ್ನು ನೆಡುವುದನ್ನು ಬಿಟ್ಟ ಕಾರಣ ಬೋರ್ವೆಲ್ ನೀರಿಗೆ ಮೊರೆ ಹೋಗಿ, ಕುಡಿಯುವ ನೀರಿನಲ್ಲಿ ಸಾರಾಂಶವಿಲ್ಲದೆ. ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ಕಲ್ಯಾಣಿಗಳಲ್ಲಿ ನೀರು ತುಂಬಿ ಕುಡಿವ ನೀರು ಸಿಗಲಿ ಎಂಬುದೆ ಇದರ ಆಶಯವಾಗಿದೆ ಎಂದರು. ನಾವುಗಳು ನಮ್ಮ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿರುವ ಕಲ್ಯಾಣಿಗಳನ್ನು ಸ್ವಚ್ಛ ಮಾಡುವ ಮೂಲಕ ಬರುವ ಮಳೆಯಿಂದ ಕಲ್ಯಾಣಿಗಳು ತುಂಬಿ ಗ್ರಾಮಸ್ಥರಿಗೆ ಜಾನುವಾರುಗಳಿಗೆ ಕುಡಿಯುವ ನೀರು ಸೌಲಭ್ಯ ಸಿಗಲಿ. ಕಲ್ಯಾಣಿ ಸ್ವಚ್ಚತೆ ಮಾಡುವ ಒಳ್ಳೆಯ ಉದ್ದೇಶವಾಗಿರುತ್ತದೆ ಆ ದಿಸೆಯಲ್ಲಿ ಗ್ರಾಮದಲ್ಲಿನ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು. ಸ್ವಚ್ಛತಾ ಶ್ರಮದಾನದಲ್ಲಿ ಹನಮಂತಗೌಡ ಪೋಲಿಸ್ ಪಾಟೀಲ್ ಸಹಾಯಕ ನಿದೇಶಕ್ ರು(ಪಂಚಾಯತ್ ರಾಜ್), ವಿಶ್ವನಾಥ ರಾಠೋಡ ಸಹಾಯಕ ನಿರ್ದೇಶಕರು(ಗ್ರಾಉ), ಗ್ರಾಮ ಪಂಚಾಯತ ಅಧ್ಯಕ್ಷರಾದ ಚೆನ್ನಮ್ಮ ಅಳ್ಳಪ್ಪ ವಾಲ್ಮೀಕಿ, ಮಂಜುನಾಥ ನರೇಗಲ್, ಪಂಚಾಯತ ಅಭಿವೃದ್ದಿ ಅಧಿಕಾರಿ ಚಂದಪ್ಪ ಗುಡಿಮನಿ, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಬಸವರಾಜ ಕೆ, ಗ್ರಾಮದ ಪ್ರಮುಖರಾದ ಚನ್ನಬಸಪ್ಪ ಮಾಲಗಿತ್ತಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು ಹಾಜರಿದ್ದರು