ಹೊಸಪೇಟೆ

ನಾಡು ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ: ಡಾ. ನಿಷ್ಠಿ ರುದ್ರ​‍್ಪ

ನಾಡು ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ: ಡಾ. ನಿಷ್ಠಿ ರುದ್ರ​‍್ಪ

ಹೊಸಪೇಟೆ 26: ಕನ್ನಡ ಸಾಹಿತ್ಯ ಪರಿಷತ್ತಿಗೆ 108 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಕನ್ನಡ ನಾಡು ನುಡಿಯ ಸೇವೆಯನ್ನು ಮಾಡುತ್ತಾ ಬಂದಿದೆ. ಕನ್ನಡ ನಾಡು ನುಡಿಯನ್ನು ರಕ್ಷಿಸಿ ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಹೊಣೆಯಾಗಿದೆ ಎಂದು ಅಖಂಡ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರ​‍್ಪ ಅಭಿಪ್ರಾಯಪಟ್ಟರು. 

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊಸಪೇಟೆ ವತಿಯಿಂದ ನಗರದ ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿ. 25ರಂದು ಆಯೋಜಿಸಲಾಗಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ದಸರಾ ಕಥಾ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಮತ್ತು ಅಂಚೆ ಕುಂಚ ಕನ್ನಡ ಧ್ವಜ ಸ್ಪರ್ಧೆ ಬಹುಮಾನ ವಿತರಣಾ, ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ, ನೆಲ ಜಲ, ಕಲೆ ಸಾಹಿತ್ಯ ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸುತ್ತಿದೆ. ನಾಡಿನ ಪ್ರತಿಯೊಬ್ಬರೂ ನಾಡು ನುಡಿಗಾಗಿ ಪ್ರಾಮಾಣಿಕವಾಗಿ ದುಡಿಯುವುದು ಅಗತ್ಯವಾಗಿದೆ ಎಂದು ನಿಷ್ಠಿ ರುದ್ರ​‍್ಪ ಹೇಳಿದರು. 

ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಅವರು ಉಪನ್ಯಾಸ ನೀಡುತ್ತಾ, ಕನ್ನಡ ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಲ್ಲ. ನಮ್ಮ ನಾಡಿನ ಸಂಸ್ಕ್ರತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ ಬೆಳೆಸುವಂತಹದ್ದು ಎಂದರು. 

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ನಾಯಕರ ಹುಲುಗಪ್ಪನವರು, ಕನ್ನಡ ಸಾಹಿತ್ಯ ಪರಿಷತ್ತು ಜನರ ಬಳಿ ಸಾಹಿತ್ಯ ಪರಿಷತ್ತನ್ನು ಒಯ್ದು ಅವರಿಗೆ ಭಾಷೆಯ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಪಡಿಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಮುಂದೆಯೂ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.  

ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಗುರು ರಾಘವೇಂದ್ರಾಚಾರ್ ಎಂ., ವಿಜಯನಗರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಕಟಿಗಿ ಜಂಬಯ್ಯ ನಾಯಕ, ಸಮಾಜ ಸೇವಕರಾದ ಗೋವಿಂದ ಕುಲಕರ್ಣಿ, ಕರುನಾಡಕಲಿಗಳ ಕ್ರಿಯಾಶೀಲ ಸಂಘದ ಉಪಾಧ್ಯಕ್ಷರಾದ ಗುಜ್ಜಲ್ ಗಣೇಶ, ಕಾರಿಗನೂರಿನ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಎಸ್‌. ಯರಿಸ್ವಾಮಿ ಹಾಗೂ ದಸರಾ ಕಥಾ ಸ್ಪರ್ಧೆಯ ತೀರ​‍್ುಗಾರರಾದ ಡಾ. ಉತ್ತಂಗಿ ವೀರೇಶ ಪಾಲ್ಗೊಂಡಿದ್ದರು.ಕಥಾ ಸ್ಪರ್ಧೆ ಮತ್ತು ಅಂಚೆ ಕುಂಚ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. 

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಉಮಾಮಹೇಶ್ವರ, ಗುಂಡಿ ಮಾರುತಿ, ಕೆ.ಬಸವರಾಜ, ಸೊ.ದಾ.ವಿರೂಪಾಕ್ಷಗೌಡ, ಡಾ.ಸಂಗಮೇಶ ಎಸ್‌. ಗಣಿ, ಡಾ.ರಮೇಶ, ಮಾ.ಬ. ಸೋಮಣ್ಣ , ನರೇಂದ್ರ, ಕಥಾ ಸ್ಪರ್ಧೆ ಮತ್ತು ಅಂಚೆ ಕುಂಚ ಸ್ಪರ್ಧೆಯ ವಿಜೇತರು, ಮಕ್ಕಳ ಪೋಷಕರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. 

ಮಹಿಳಾ ಸಮಾಜ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಕಾಶ್ ಕೆ. ಸ್ವಾಗತಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜರಿನಾಬೇಗಂ ನೆರವೇರಿಸಿದರು. ಸಂಘಟನಾ ಕಾರ್ಯದರ್ಶಿ ಎಲ್‌. ಹಾಲ್ಯಾನಾಯ್ಕ ವಂದಿಸಿದರು. ವೀರಮ್ಮ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ