ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ
ಶಿಗ್ಗಾವಿ 17: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯನ್ನು ಈದ ಮಿಲಾದ್ ಹಬ್ಬವೆಂದು ಆಚರಿಸಲಾಗುತ್ತಿದೆ. ಪಟ್ಟಣದ ವಿವಿಧ ಮುಸ್ಲಿಂ ಸಂಘಟನೆಯ ನೇತೃತ್ವದಲ್ಲಿ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ನಂತರ ಧರ್ಮ ಜಾಗೃತಿ ಜಾಥಾ ಮಾಡುವ ಮೂಲಕ ಜಶ್ನೆ ಈದ್ ಮಿಲಾದ್ ನಭೀ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪೀರ ಖಾದ್ರೀ, ಮುಖಂಡ ಯಾಶೀರಖಾನ ಪಠಾಣ, ಸೋಮಣ್ಣ ಬೇವಿನಮರದ, ಸಿ.ಪಿ.ಐ ಮಾಳಗೊಂಡ, ಪಿ.ಎಸ್.ಐಗಳಾದ ಉಮಾ ಪಾಟೀಲ, ಚಂದ್ರಶೇಖರ ವಿಭೂತಿ, ಸುಬಹಾನಿ ಚೂಡಿಗಾರ, ಸಿ.ಎಂ.ಪೈಜ್, ಹಾವೇರಿ ವಕ್ಪಬೋರ್ಡ ಸದಸ್ಯ ಮಹ್ಮದಹನೀಫ್ ಅಂಬೂರ, ಅಂಜುಮನ ಸಂಸ್ಥೆ ಅಧ್ಯಕ್ಷ ಸುಲೇಮಾನ ಖಾಜೇಖಾನವರ, ಉಪಾಧ್ಯಕ್ಷ ಮಜೀದ ಮಾಳಗಿಮನಿ, ಕಾರ್ಯದರ್ಶಿ ಅಹ್ಮದಭಾಷಾ ಗುಲಾಮೊದ್ದೀನ, ಅಬ್ದುಲ್ ಕರೀಂ ಮೊಗಲಲ್ಲಿ, ಅಲ್ಲಾಭಕ್ಷ ಸೌದಾಗರ, ಸರತಾಜ ಹಾನಗಲ್ಲ, ಜಾಫರ ಪಠಾಣ, ಅತ್ತಾವುಲ್ಲಾ ಖಾಜೇಖಾನವರ, ಜಾಕೀರ ಅಹ್ಮದ ತೌಕಲ್ಲಿ, ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.