ರಾಣೆಬೆನ್ನೂರ

ದೈಹಿಕ ಶಿಕ್ಷಣ ಪರೀವೀಕ್ಷಕರಾಗಿ ಪದೋನ್ನತಿ; ಬೀಳ್ಕೊಡುಗೆ

ದೈಹಿಕ ಶಿಕ್ಷಣ ಪರೀವೀಕ್ಷಕರಾಗಿ ಪದೋನ್ನತಿ;  ಬೀಳ್ಕೊಡುಗೆ

ರಾಣೇಬೆನ್ನೂರ 21: ನಗರದ ಪ್ರಾಥಮಿಕ ಶಾಲಾ ನೌಕರರ ಸಂಘದ ಸಭಾಭವನದಲ್ಲಿ ದೈಹಿಕ ಶಿಕ್ಷಣ ಪರೀವಿಕ್ಷಕರಾಗಿ ಪದ್ದೋನ್ನತಿ ಹೊಂದಿದ ಗುಡಿಹೊನ್ನತಿ ಸರಕಾರಿ ಪ್ರೌಢಶಾಲೆಯ ರಾಯಪ್ಪ ಮೇಟಿ ಹಾಗೂ ಮಾಕನೂರ ಶ್ರೀ ಮಾರ್ಕಂಡೇಶ್ವರ ಸರಕಾರಿ ಪ್ರೌಢಶಾಲೆಯ ಶಾಂತಪ್ಪ ಪಮ್ಮಾರ ಇವರನ್ನು ರಾಜ್ಯ  ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತಾಲೂಕ ಘಟಕ ಹಾಗೂ ಮಾಧ್ಯಮಿಕ ಶಾಲಾ ನೌಕರರ ಸಂಘ, ಪ್ರಾಥಮಿಕ ಶಾಲಾ ನೌಕರರ ಸಂಘವು ಸಂಯುಕ್ತವಾಗಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. 

ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಮ್‌.ಎಸ್‌. ಗಾಣಿಗೆರ, ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್‌.ಎಫ್‌. ಬೀರಜ್ಜನವರ,  ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಛಲವಾದಿ,  ಬಿ.ಪಿ. ಶೀಡೆನೂರ, ಸುರೇಶ ಕೊಟ್ಟಿಹಾಳ,  ಸುರೇಶ ಪಾರ್ವತೇರ, ಶಾಂತರಾಜ, ಮಹೇಶ ಕಂಬಳಿ, ಎಚ್‌.ಆರ್‌.ಹರಿಹರ, ರಾಮು ಲಮಾಣಿ, ವಿಶ್ವನಾಥ ಬಾತಿ, ಆನಂದ ಲಮಾಣಿ ಸೇರಿದಂತೆ ಮತ್ತಿತರೆ ಶಿಕ್ಷಕರು, ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ