ಆರ್ಟಿಇಎಸ್ ಕಾಲೇಜಿನಲ್ಲಿ ಕೇಂದ್ರ ಬಜೆಟ್ ಪರ ಸುಧೀರ್ಘ ಚರ್ಚೆ
ರಾಣಿಬೆನ್ನೂರ 21: ನಗರ ಹೊರವಲಯದ ಆರ್ಟಿಇಎಸ್ ಕಾಲೇಜು ಸಾವುಕಾರ ಸಭಾಭವನದಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಮೇಲಿನ ವಿಷಯ ಕುರಿತು ಸಂಬಂಧಿಸಿದ ಉಪನ್ಯಾಸಕರು, ವಿದ್ಯಾರ್ಥಿಗಳು ಸುಧೀರ್ಘವಾಗಿ ಚರ್ಚಿಸಿದರು.
ಬಜೆಟ್ ಚರ್ಚೆ ಕಾರ್ಯಕ್ರಮವು ಹಂಸಭಾವಿ ಮಹಾಂತ ಸ್ವಾಮಿ ಕಲಾ ವಿಜ್ಞಾನ ವಾಣಿಜ್ಯ ಪದವಿ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ ಪಿ ಅವರು, ಉದ್ಘಾಟಿಸಿ ಚಾಲನೆ ನೀಡಿದರು. ಕಾಲೇಜು ಪ್ರಾಚಾರ್ಯ ಎಫ್.ಎಚ್.ಮಾಚೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ ಬಮ್ಮನಾಳ, ಐಕ್ಯೂಎಸಿ ಸಂಯೋಜಕ ಡಾ.ಮಧುಕುಮಾರ ಆರ್, ಕಾರ್ಯಕ್ರಮಾಧಿಕಾರಿ ರಮೇಶ್ ಎನ್.ಬಿ. ಶಿವಕುಮಾರ ಬೆಣ್ಣಿ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.