ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮ
ಶಿಗ್ಗಾವಿ 16: ತಾಲೂಕಿನ ಕೋಣನಕೇರಿ ಹಾಗೂ ಚಂದಾಪುರಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾಮ ಪಂಚಾಯತಿ ಸದಸ್ಯ ಕುಮಾರ್ ಮಾಸನಕಟ್ಟಿ ಮಾತನಾಡಿ ಪ್ರತಿ ವರ್ಷವೂ ಸಹ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಿ ಅವರಲ್ಲಿರುವ ವಿಶೇಷ ಪ್ರತಿಭೆಗಳನ್ನು ಕಾರಂಜಿಯಂತೆ ಹೊರ ಹೊಮ್ಮಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಸುಬಿ ಗೌ ಗೌಳಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಗೆಬಗೆಯ ಉಡುಪುಗಳನ್ನು ಧರಿಸಿ ವಿವಿಧ ಪಾತ್ರಗಳಿಗೆ ಅನುಗುಣವಾಗುವಂತೆ ಭಾಷೆ, ಹಾವ ಭಾವಇವೆಲ್ಲ ವಿವಿಧ ಬಗೆಯ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳುವುದೇ ಈ ಕಾರ್ಯಕ್ರಮದ ಮಹತ್ವ ಎಂದರು.
ಅಧ್ಯಕ್ಷತೆಂಚಿುನ್ನು ಪರಶುರಾಮ ಹುಲಸೋಗ್ಗಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹನಮಂತಪ್ಪ ತಿಮ್ಮೆನಕೊಪ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿ,ಟಿ,ಸಾಗರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾ ಏಚ್,ಎಂ, ಪಡ್ನೇಶಿ, ಊರಿನಗಣ್ಯರಾದ ಅಶೋಕ ಶಿಗ್ಗಾವಿ, ಅನಿಲ ಹೊಸಮನಿ, ಮಂಜಣ್ಣ ಹೀರೂರು, ನಾಗರಾಜ ದಾವಣಗೆರೆ, ಕುಮಾರಣ್ಣ ಮಾಸನಕಟ್ಟಿ, ಪುಂಡಲಿಕಪ್ಪ ಬಿಂಕನಕಟ್ಟಿ, ಅಣ್ಣಪ್ಪ ವಾಲ್ಮೀಕಿ, ಮಹೇಶ ಹುಲಸೋಗಿ ಹಾಗೂ ಶಾಲೆಯ ಎಲ್ಲ ಸಹ ಶಿಕ್ಷಕರು ಮತ್ತು ಇನ್ನೂ ಅನೇಕ ಊರಿನಗಣ್ಯರು ಉಪಸ್ಥಿತರಿದ್ದರು.