ವೃತ್ತಿಪರ ನಿರ್ಲಕ್ಷ್ಯ ಕಾನೂನು ಕುರಿತು ಸಂಶೋಧನೆ: ಪ್ರಾ. ಪ್ರಹ್ಲಾದ ಆಚಾರ್ಯ ಯಜುರ್ವೇದಿಗೆ ಪಿಎಚ್.ಡಿ.
ಬೆಳಗಾವಿ, ಆ. 18: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಕೆಎಲ್ಇ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಹ್ಲಾದ ಆಚಾರ್ಯ ಯಜುರ್ವೇದಿ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
‘ಎ ಕ್ರಿಟಿಕಲ್ ಸ್ಟಡಿ ಆಫ್ ಲಾ ರಿಲೇಟಿಂಗ್ ಟು ಪ್ರೊಫೆಷನಲ್ ನೆಗ್ಲಿಜೆನ್ಸ್ ಇನ್ ಇಂಡಿಯಾ’ ವಿಷಯ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡೀನ್ ಡಾ. ರತ್ನಾ ಭರಮಗೌಡರ ಅವರು ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.
ಪ್ರಾ. ಪ್ರಹ್ಲಾದ ಆಚಾರ್ಯ ಯಜುರ್ವೇದಿ ಅವರ ಸಾಧನೆಗೆ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.