ಬೆಳಗಾವಿ

ಈರ​‍್ಪ ಅಜ್ಜನವರ ನೂತನ ಪಲ್ಲಕ್ಕಿ ಮೆರವಣಿಗೆ

ಈರ​‍್ಪ ಅಜ್ಜನವರ ನೂತನ ಪಲ್ಲಕ್ಕಿ ಮೆರವಣಿಗೆ


ಯಮಕ ಮರಡಿ, ಆ.25: ಸಮೀಪದ ದಾದಬನಹಟ್ಟಿ ಗ್ರಾಮದ ಕೆರಿ ಈರ​‍್ಪ ಅಜ್ಜನವರ ನೂತನ ಪಲ್ಲಕ್ಕಿ ಹಾಗೂ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.  

ಸ್ಥಳೀಯ ಹರಿಮಂದಿರದ ಪೂಜಾರಿ ಆನಂದ ಮಹಾರಾಜ್ ಗೋಸಾವಿ ಅವರು ಆ.24ರಂದು ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಈರ​‍್ಪ ಅಜ್ಜನವರ ಅಪಾರ ಭಕ್ತರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.  

ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಜಾನಪದ ಕಲಾವಿದ ಗೋಪಾಲ ಚಪ್ಪಣಿ ಹಾಗೂ ತಂಡದವರು ಈರ​‍್ಪ ಅಜ್ಜನವರ ಕುರಿತು ಸ್ವರಚಿತ ಭಕ್ತಿ ಗೀತೆಗಳನ್ನು ಸಾದರಪಡಿಸಿದರು. ತಂಡದ ಸಹಾಯಕ ಕಲಾವಿದರಾದ ಮಹೇಶ್ ಹಾಗೂ ಸಂತ ರಾಮ ವಿಷ್ಣು ತುಳಗನವಾಡಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ವಾದ್ಯವೃಂದದ ಮೂಲಕ ಮೆರುಗು ನೀಡಿದರು.  

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗೋಪಾಲ ಚಪ್ಪಣಿ ಹಾಗೂ ತಂಡದವರ ಕಲಾ ಪ್ರದರ್ಶನ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. 


ಸುದ್ದಿ ಓದಿ