ರಾಷ್ಟ್ರೀಯ

ನಾಗಾಲ್ಯಾಂಡ್ ಸಂಸ್ಥಾಪನಾ ದಿನ : ಶುಭ ಕೋರಿದ ಪ್ರಧಾನಿ

ನಾಗಾಲ್ಯಾಂಡ್ ಸಂಸ್ಥಾಪನಾ ದಿನ : ಶುಭ ಕೋರಿದ ಪ್ರಧಾನಿ

ನವದೆಹಲಿ, ಡಿಸೆಂಬರ್ 01: ನಾಗಾಲ್ಯಾಂಡ್ ನ 58 ನೇ ಸಂಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

"ನಾಗಾಲ್ಯಾಂಡ್ ನ ನನ್ನ ಸಹೋದರ, ಸಹೋದರಿಯರಿಗೆ ಅವರ ರಾಜ್ಯತ್ವ ದಿನದಂದು ಶುಭಾಶಯಗಳು. ನಾಗಾಲ್ಯಾಂಡ್‌ನ ಜನರು ಧೈರ್ಯ ಮತ್ತು ದಯೆಯಿಂದ ಹೆಸರುವಾಸಿಯಾಗಿದ್ದಾರೆ. ಅವರ ಸಂಸ್ಕೃತಿ ಅನುಕರಣೀಯವಾಗಿದೆ ಮತ್ತು ಭಾರತದ ಪ್ರಗತಿಗೆ ಅವರ ಕೊಡುಗೆ ಗಣನೀಯವಾಗಿದ್ದು, ನಾಗಾಲ್ಯಾಂಡ್‌ನ ನಿರಂತರ ಅಭಿವೃದ್ಧಿಗೆ ಪ್ರಾರ್ಥನೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನಾಗಾಲ್ಯಾಂಡ್ 1963 ರಲ್ಲಿ ರಾಜ್ಯವಾಯಿತು. ನಾಗಾಲ್ಯಾಂಡ್ ಗೆ ರಾಜ್ಯತ್ವವನ್ನು ನೀಡಲು ನಾಗಾಲ್ಯಾಂಡ್ ರಾಜ್ಯ ಕಾಯ್ದೆ 1962 ಅನ್ನು ಸಂಸತ್ತು ಜಾರಿಗೆ ತಂದಿತು.

ಸುದ್ದಿ ಓದಿ