ಚೇತನ್ ಚೌಹಾನ್ ನಿಧನಕ್ಕೆ ಪ್ರಧಾನಿ ಸಂತಾಪ
ನವದೆಹಲಿ,ಆಗಸ್ಟ್16: ಭಾರತದ ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರು ಅದ್ಭುತ ಕ್ರಿಕೆಟಿಗ ಮತ್ತು ಕಠಿಣ ಪರಿಶ್ರಮಿ ರಾಜಕಾರಣಿ ಎಂದು ಹೇಳಿದ್ದಾರೆ. ಹರಿಯಾಣದ ಗುರುಗ್ರಾಮ್ನ ಮೆದಾಂತ್ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಚೌಹಾನ್ ನಿಧನರಾದರು. "ಚೇತನ್ ಚೌಹಾನ್ ಅದ್ಭುತ ಕ್ರಿಕೆಟಿಗ ಮತ್ತು ನಂತರ ಕಠಿಣ ಕೆಲಸ ಮಾಡುವ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಬಲಪಡಿಸಲು ಅವರು ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ನನಗೆ ಬೇಸರವಾಗಿದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಸಚಿವ ಚೇತನ್ ಚೌಹಾನ್ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಯೋಗಿ ಟ್ವೀಟ್ ಮಾಡಿದ್ದಾರೆ, “ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ಹಾಗೂ ಮಂತ್ರಿ ಮಂಡಲದ ಸಹೋದ್ಯೋಗಿ ಚೇತನ್ ಚೌಹಾನ್ ಅವರ ಅಕಾಲಿಕ ನಿಧನರಾಗಿದ್ದಾರೆ. ಭಗವಾನ್ ಶ್ರೀ ರಾಮ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ತಿಳಿಸಿದ್ದಾರೆ.