ಸಂಸದರ ಬಹು ಮಹಡಿ ಫ್ಲ್ಯಾಟ್ ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿ,
ನವೆಂಬರ್ 23: ದೆಹಲಿಯಲ್ಲಿ ಸಂಸದರಿಗಾಗಿ ನಿರ್ಮಾಣಗೊಂಡಿರುವ ಬಹು-ಮಹಡಿ ಫ್ಲ್ಯಾಟ್ಗಳನ್ನು ಪ್ರಧಾನಿ
ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಸದರ ವಸತಿಯ ಬಹು ಸಮಯದ ಸಮಸ್ಯೆ ಈಗ ಪರಿಹಾರಗೊಂಡಿದೆ. ದಶಕಗಳ ಹಿಂದಿನ ಸಮಸ್ಯೆಗಳು ನಿರ್ಲಕ್ಷ್ಯಿಸುವುದರಿಂದಲ್ಲ, ಪರಿಹಾರ ಕಂಡುಕೊಳ್ಳುವುದರಿಂದ ಬಗೆಹರಿಯುತ್ತವೆ ಎಂದರು.
ಜೊತೆಗೆ, ದೆಹಲಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಯೋಜನೆಗಳ ಪಟ್ಟಿ ನೀಡಿದ ಮೋದಿ, ಸರ್ಕಾರ ಅವುಗಳ ಕಾಮಕಾರಿಯನ್ನು ಕೈಗೆತ್ತಿಕೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ, ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಚರ್ಚೆ ಆರಂಭಗೊಂಡಿತ್ತು. ಆದರೆ, ಅದಾಗಿ 23 ವರ್ಷಗಳ ನಂತರ ಈ ಸರ್ಕಾರ ಅದನ್ನು ಪೂರ್ಣಗೊಳಿಸಿದೆ ಎಂದರು.
ನವದೆಹಲಿಯ ಡಾ.ಬಿ.ಡಿ.ಮಾರ್ಗ್ನಲ್ಲಿ ನಿರ್ಮಾಣಗೊಂಡಿರುವ ಸಂಸದರ 72 ಕಟ್ಟಡ ನಿರ್ಮಾಣಕ್ಕಾಗಿ 80 ವರ್ಷ ಹಳೆಯ 8 ಬಂಗ್ಲೆಗಳನ್ನು ಮರುರೂಪಿಸಲಾಗಿದೆ.
ಈ ಯೋಜನೆಯಲ್ಲಿ ಎಲ್ಲಾ ಹಸಿರು ಕಟ್ಟಡ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದು ಸಂಸದರ ಮತ್ತು ಇತರ ನಿವಾಸಿಗಳನ್ನು ಸುರಕ್ಷಿತವಾಗಿಡಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.