ರಾಸಾಯನಿಕ ದುರಂತ ತಡೆಗಟ್ಟುವಿಕೆಯ ದಿನ ಆಚರಣೆ
ಬಳ್ಳಾರಿ 16: ಜೆ.ಎಸ್.ಡಬ್ಲ್ಯೂ ಸ್ಟೀಲ್ ಮತ್ತು ಕಾಖರ್ಾನೆ ಇಲಾಖೆ ಇವರ ಸಹಯೋಗದಲ್ಲಿ ರಾಸಾಯನಿಕ ದುರಂತ ತಡೆಗಟ್ಟುವಿಕೆಯ ದಿನವನ್ನು ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ರ್ಸನಲ್ಲಿ ಆಚರಿಸಿದರು. ಭೋಪಾಲ ಅನಿಲ ದುರಂತದಿಂದ ಬಲಿಯಾದವರ ಗೌರವಾರ್ಪಣೆ ಮತ್ತು ಆ ಘಟನೆಯಿಂದ ಪಾಠ ತಿಳಿದುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಸುರಕ್ಷಿತ ಅನಿಲ ನಿಭಾಯಿಸುವ ಅಭ್ಯಾಸಗಳು, ಮತ್ತು ಸುರಕ್ಷಿತ ವ್ಯವಸ್ಥೆಗಳ ಪಾಲನೆ ಮಾಡುವ ವಿಧಾನವನ್ನು ಮೆರವಣಿಗೆ ಮತ್ತು ಸ್ಕಿಟ್ಗಳ ಮೂಲಕ ಪ್ರದಶರ್ಿಸಲಾಯಿತು. ಹಾಗೂ ಆನ್-ಸೈಟ್ ಎಮಜರ್ೆನ್ಸಿ ಡ್ರಿಲ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾತ ಮನೋಹರ, ಕಾಖರ್ಾನೆಗಳ ಜಂಟಿ ನಿದರ್ೇಶಕ ಡಿ.ಸಿ. ಜಗದೀಶ್, ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ವಕ್ರ್ಸನ ಅಧ್ಯಕ್ಷರು ರಾಜಶೇಖರ ಪಟ್ಟನಶೆಟ್ಟಿ ಹಾಗೂ ಜೆ.ಎಸ್.ಡಬ್ಲ್ಯೂ ಅಧಿಕಾರಿವೃಂದ, ಬಳ್ಳಾರಿ ಡಿಸ್ಟ್ರಿಕ್ ಕ್ರೈಸಿಸ್ ಮ್ಯಾನೆಜ್ಮೆಂಟ್ ಸದಸ್ಯರು ಉಪಸ್ತಿತರಿದ್ದರು. ಮೋಕ್ ಡ್ರಿಲ್ನಲ್ಲಿ ಕೊರೆಕ್ಸ ಗ್ಯಾಸ್ ಹೋಲ್ಡ್ರನಿಂದ ಗ್ಯಾಸ್ ಲೀಕೆಜ್ನ್ನು ಈ ಸಂಧರ್ಭದಲ್ಲಿ ಚಿತ್ರಿಸಿದರು. ಹತ್ತಿರದ ಕೈಗಾರಿಕೆಗಳು ಮತ್ತು ಕನರ್ಾಟಕ ರಾಜ್ಯ ಅಗ್ನಿಶಾಮಕ ತಂಡ ಭಾಗವಹಿಸಿದ್ದವು. ಅಗ್ನಿಶಾಮಕ ಪ್ರಕ್ರಿಯೆ ಹಾಗೂ ನಿಯಂತ್ರಣ ಕ್ರಮಗಳು, ಸ್ಥಾಳಾತಂರಿಸುವಿಕೆ ಹಾಗೂ ಪ್ರಥಮ ಚಿಕಿತ್ಸೆಯ ವಿಧಾನವನ್ನು ಜೆ.ಎಸ್.ಡಬ್ಲ್ಯೂ ಸ್ಟೀಲ್ ವಿಜಯನಗರ ತಂಡವು ಪ್ರದಶರ್ಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಮಪ್ರಸಾತ ಮನೋಹರ, ತುತರ್ುಸ್ಥಿತಿಗಳನ್ನು ತಗ್ಗಿಸುವಲ್ಲಿ ಜೆ.ಎಸ್.ಡಬ್ಲ್ಯೂ ಸ್ಟೀಲ್ ಅಳವಡಿಸಿಕೊಂಡಿರುವ ಸಾಮಥ್ರ್ಯ ಹಾಗೂ ವಿಧಾನವನ್ನು ಶ್ಲಾಘಿಸಿದರು. ತುತರ್ುಪರಿಸ್ಥಿತಿಯ ಪ್ರಾಮುಖ್ಯತೆ ಮತ್ತು ನಿರಂತರವಾದ ಸುಧಾರಣೆಗೆ ಅವರು ಒತ್ತಾಯಿಸಿದರು. ರಾಸಾಯನಿಕ ತುತರ್ುಸ್ಥಿತಿಗಳನ್ನು ತಡೆಗಟ್ಟುವುದು, ನಿಯಂತ್ರಿಸುವುದು ಹಾಗೂ ತಡೆಗಟ್ಟುವ ಅವಶ್ಯಕತೆಗಳನ್ನು ವಿವರಿಸಿದರು. ಜೆ.ಎಸ್.ಡಬ್ಲ್ಯೂ. ಸ್ಟೀಲ್ ಬಗ್ಗೆ: ಯು.ಎಸ್ $12 ಬಿಲಿಯನ್ನ ಜೆ.ಎಸ್.ಡಬ್ಲ್ಯೂ ಸವೂಹವು ಸ್ಟೀಲ್, ಎನಜರ್ಿ, ಇನ್ಫ್ರಾಸ್ಟ್ರಕ್ಚರ್, ವೆಂಚಸರ್್ ಹಾಗೂ ಸ್ಪೋಟ್ಸ್ ಒಳಗೊಂಡಿದೆ. ಜೆ.ಎಸ್.ಡಬ್ಲ್ಯೂ. ಸ್ಟೀಲ್ ಭಾರತದಲ್ಲಿ 18 ಎಮ್.ಟಿ.ಪಿ.ಎ ಉಕ್ಕು ತಯಾರಿಕ ಸಾಮಥ್ರ್ಯ ಹೊಂದಿರುವ ಉಕ್ಕು ಸ್ಥಾವರವಾಗಿದೆ. ಕನರ್ಾಟಕದ ವಿಜಯನಗರದಲ್ಲಿರುವ ಜೆ.ಎಸ್.ಡಬ್ಲ್ಯೂ. ಸ್ಟೀಲ್ ಸ್ಥಾವರವು 12 ಎಮ್.ಟಿ.ಪಿ.ಎ ಸಾಮಥ್ರ್ಯ ಹೊಂದಿದೆ ಎಂದು ಹೇಳಿದರು.