ರಾಷ್ಟ್ರೀಯ

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ನಿಧನಕ್ಕೆ ರಾಷ್ಟ್ರಪತಿ –ಪ್ರಧಾನಿ ಸಂತಾಪ

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್  ನಿಧನಕ್ಕೆ ರಾಷ್ಟ್ರಪತಿ –ಪ್ರಧಾನಿ ಸಂತಾಪ

ನವದೆಹಲಿ, ನವೆಂಬರ್ 25: ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ಅವರಿ ಈ ಕುರಿತು ಟ್ವೀಟ್ ಸಂದೇಶ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಇನ್ನಿಲ್ಲ ಎಂಬುದು  ಬಹಳ ದುಃಖದ ಸಂಗತಿಒಬ್ಬ ತಂತ್ರಜ್ಞನ ಕೌಶಲ್ಯ ಮತ್ತು ಸಾಮೂಹಿಕ ನಾಯಕ ಮೋಡಿ ಗುಣ ಹೊಂದಿದವರು  ಪಕ್ಷದ ವ್ಯಾಪ್ತಿ ಮೀರಿದ ಅವರ ಸ್ನೇಹ , ಸಬಂಧ  ಅವರದಾಗಿತ್ತು  ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. " ಎಂದಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.ಈಕುರಿತು ಟ್ವೀಟ್ ಮಾಡಿದ ಅವರು , "ಅಹ್ಮದ್ ಪಟೇಲ್ ಅವರ ಸಾವಿನಿಂದ ಬಹಳ  ದುಃಖವಾಗುತ್ತಿದೆ. ಹಲವು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಅವರು ಸಮಾಜಕ್ಕಾಗಿ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದರಲ್ಲಿ ಅವರ ತೀಕ್ಷ್ಣ ಮನಸ್ಥಿತಿ ಮತ್ತು ಬುದ್ಧಿಚಾತುರ್ಯ ಯಾವಾಗಲೂ ನೆನಪಿನಲ್ಲಿ ಉಳಿಯಲಿದೆ. ಅಹ್ಮದ್ ಪಟೇಲ್ ಜೀ ಅವರ ಆತ್ಮಕ್ಕೆ ಶಾಂತಿ ಸಿಗಲಿ  ಎಂದೂ  ಪ್ರಧಾನಿ ಕಂಬನಿ ಮಿಡಿದಿದ್ದಾರೆ. 

ಸುದ್ದಿ ಓದಿ