ಪ್ರೇಮಂ ಪೂಜ್ಯಂ ಸಂಬಂಧಗಳಲ್ಲಿರಲಿ ಪೂಜ್ಯ ಭಾವ!
ಬೆಂಗಳೂರು, ನ. 09: ಕೆದಂಬಾಡಿ ಕ್ರಿಯೇಶನ್ಸ್ ಮೂಲಕ ಡಾ.ಬಿ.ಎಸ್. ರಾಘವೇಂದ್ರ ಅವರು ನಿರ್ದೇಶಿಸಿರುವ, ಬಹುತೇಕ ಡಾಕ್ಟರ್‌ಗಳೇ ಸೇರಿ ನಿರ್ಮಿಸಿರುವ ಲವ್ಲಿಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಇದೇ 12ರ ಶುಕ್ರವಾರ ಬಿಡುಗಡೆಯಾಗಲಿದೆ. ವಿದ್ಯಾರ್ಥಿ ಜೀವನದಿಂದ ಹಿಡಿದು ನಾಯಕನ ಪ್ರೀತಿಯ ಕಥೆಯ ವಿವಿಧ ಹಂತಗಳನ್ನು ಹೇಳುವ ಚಿತ್ರವಿದು.
ಲವ್ಲಿ ಸ್ಟಾರ್ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ.
ಡಾ.ರಕ್ಷಿತ್ ಕದಂಬಾಡಿ, ಡಾ. ರಾಜ್‌ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಹಾಗೂ ರಾಘವೇಂದ್ರ ಎಸ್. ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಾಧವ ಕಿರಣ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ನವೀನ್ ಕುಮಾರ್ ಅವರ ಕ್ಯಾಮೆರಾವರ್ಕ್, ರಾಘವೇಂದ್ರ ಅವರ ಸಂಗೀತ ಸಂಯೋಜನೆ, ಹರೀಶ್ ಕೊಮ್ಮೆ ಅವರ ಸಂಕಲನ ಈ ಚಿತ್ರಕ್ಕಿದೆ. ಮಾಸ್ಟರ್ ಆನಂದ್, ಟಿ.ಎಸ್.ನಾಗಾಭರಣ, ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ.