ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳೂಂದಿಗೆ ಪೂರ್ವಭಾವಿ ಸಭೆ
ಲೋಕದರ್ಶನ ವರದಿ
ಶಿಗ್ಗಾವಿ 30; ನಗರದ ಪೊಲೀಸ ಠಾಣಾ ಆವರಣದಲ್ಲಿ ತಾಲೂಕಾ ದಂಡಾಧಿಕಾರಿಗಳ ನೇತೃತ್ವದಲ್ಲಿ ಪುರಸಭೆ, ಪೋಲಿಸ್ ಇಲಾಖೆ, ಅಗ್ನಿಶಾಮಕ, ಹೆಸ್ಕಾಂ ಇಲಾಖೆ ಒಳಗೊಂಡಂತೆ ತಾಲೂಕಿನ ಎಲ್ಲಾ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳನ್ನು ಪೂರ್ವಭಾವಿ ಸಭೆಗೆ ಆಹ್ವಾನಿಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಸಾರ್ವಜನಿಕರಿಗೆ ನೀಡಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಕೆ. ವಾಯ್. ಮಾತನಾಡಿ ಗಣೇಶ ಉತ್ಸವ ಮಂಡಳಿಗಳು ಪುರಸಭೆ, ಪೋಲಿಸ್, ಅಗ್ನಿಶಾಮಕ, ಹೆ.ಸ್ಕಾಂ ದಿಂದ ಕಡ್ಢಾಯವಾಗಿ ಒಪ್ಪಿಗೆ ಪತ್ರ ಪಡೆಯಬೇಕು. ವಿವಿಧಕಾರ್ಯಕ್ರಮ ಮಾಡುವಾಗ ಸುಚಿತ್ವಕಾಪಾಡಬೇಕು. ಪ್ಲ್ಯಾಸ್ಟಿಕ್ ಹರಡದಂತೆ ಸೂಕ್ತ ವ್ಯವಸ್ತೆ ಮಾಡಿಕೊಳ್ಳಬೆಕು. ಪುರಸಭೆಯಿಂದ ಸಾಂಕ್ರಾಮಿಕರೋಗ ಹರಡದಂತೆ ಔಷದ ಸಿಂಪಡನೆಗೆ ವ್ಯೆವಸ್ಥೆ ಕಲ್ಪಿಸಲು ಸಿದ್ದ. ವಿಸರ್ಜನೆಗೆ ಅಗಸಿ ಭಾವಿಯನ್ನು ಸಿದ್ದಗೊಳಿಸಲಾಗಿದೆ ಅಲ್ಲೆ ವಿಸರ್ಜನೆ ಮಾಡಬೇಕು. ಪರಿಸರ ಮಾಲಿನ್ಯ ತಡೆಯುವ ಮಣ್ಣಿನ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಿ.ಪಿ.ಐ ಬಸವರಾಜ ಹಳಬಣ್ಣವರ ಮಾತನಾಡಿ, ಸರಕಾರ ಸೂಚಿಸಿರುವ ನಿಯಮಾವಳಿಗಳ ಪ್ರಕಾರ ಉತ್ಸವ ಆಚರಿಸಬೇಕು. ಕಾನೂನು ಉಲ್ಲಂಘನೆ ಆದಲ್ಲಿ ಕಟ್ಟು ನಿಟ್ಟಿನ ಕ್ರಮ ಜರಿಗಿಸಲಾಗುವುದು. ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಆಗದಂತೆ ಪೆಂಡಾಲ ಹಾಕಿಕೊಳ್ಳ ಬೇಕು, ಪದಾದಿಕಾರಿಗಳು ಸದಾ ಗಣೇಶನನ್ನು ಪ್ರತಿಷ್ಟಾಪನೆ ಮಾಡಿದ ಜಾಗದಲ್ಲಿ ಇರಬೇಕು. ಶಾಂತಿಯಿಂದ ವಿಜೃಂಬಣೆಯಿಂದ ಹಬ್ಬವನ್ನುಆಚರಿಸಬೇಕೆಂದು ಮನವಿ ಮಾಡಿಕೊಂಡರು.
ಹೆಸ್ಕಾಂ ಅಧಿಕಾರಿಗಳು ಕಲ್ಯಾಣಕರ್ ಮಾತನಾಡಿ ವಿದ್ಯತ್ ಅಲಂಕಾರಕ್ಕೆ ಹಳೆಯ ವೈರುಗಳನ್ನು ಬಳಸಬಾರದು. ತಜ್ಞರಿಂದ ವೈರಿಂಗ ಮಾಡಿಸಿಕೊಳ್ಳಬೇಕು. ಯಾವುದೇ ವಿದ್ಯುತ್ ಅಪಘಾತ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೆಕು. ಇಲಾಖೆಯಿಂದ ಒಪ್ಪಿಗೆ ಪಡೆದು ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು. ಗಣೇಶ ವಿಸರ್ಜನೆ ವೇಳೆ ಎತ್ತರದ ದ್ವಜಗಳನ್ನು ಕಟ್ಟಬಾರದು ಎಂದು ಸೂಚಿಸಿದರು.
ಡಿ.ವೈ.ಎಸ್.ಪಿ ಆದ ಓ ಬಿ ಕಲ್ಲೇಶಪ್ಪ ಮಾತನಾಡಿ, ಎಲ್ಲಾ ಒಪ್ಪಿಗೆ ಪತ್ರಗಳು ಒಂದು ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ವ್ಯಾಜ್ಯೆಗಳಿರುವ ಜಾಗಗಳಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಬಾರದು. ರಾತ್ರಿ ಕಾವಲಿರುವವರ ಮಾಹಿತಿಯನ್ನು ಪೋಲಿಸ್ ಇಲಾಖೆಗೆ ನೀಡಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ಬರಲು ಬಾಲಗಂಗಾಧರ ತಿಲಕರು ಈ ಹಬ್ಬ ಪ್ರಾರಂಭಿಸಿದರು. ಅವರ ಆಶಯಕ್ಕೆ ದಕ್ಕೆ ತರದಂತೆ ಹಬ್ಬ ಆಚರಿಸಬೇಕು. ಪೆಂಡಾಲ ನಲ್ಲಿ ಮುಂಜಾಗೃತಕ್ರಮವಾಗಿ ಅಗ್ನಿ ನಿರೋಧಕಗಳನ್ನು ಇಟ್ಟುಕೊಂಡಿರಬೇಕು. ಹತ್ತುಗಂಟೆಯ ಮೇಲೆ ಮೈಕುಗಳನ್ನು ಬಳಸಬಾರದು. ವಿಸರ್ಜನೆ ದಿನಾಂಕವನ್ನು ಮುಂಚಿತವಾಗಿ ತಿಳಿಸಿರಬೇಕು ಎಂದು ಸೂಚಿಸಿದರು.
ಪ್ರಶಾಂತ ಬಡ್ಡಿ, ಮುತ್ತಣ್ಣ ಯಲಿಗಾರ ಸೇರಿದಂತೆ ಪಟ್ಟಣದ ಪ್ರಮೂಖರು ಸಾರ್ವಜನಿಕರು ಸಂಘಟಕರು ಇದ್ದರು