ಶಿಗ್ಗಾವ್

ಸಿಎಂ ಬೊಮ್ಮಾಯಿ ಅಭಿಮಾನಿಗಳ ಬಳಗದಿಂದ ಪೂರ್ವಭಾವಿ ಸಭೆ

ಸಿಎಂ ಬೊಮ್ಮಾಯಿ ಅಭಿಮಾನಿಗಳ ಬಳಗದಿಂದ ಪೂರ್ವಭಾವಿ ಸಭೆ

ಶಿಗ್ಗಾವಿ :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿಗಳ ಬಳಗದ ವತಿಯಿಂದ ನಡೆದ 63ನೇ ವರ್ಷದ ಹುಟ್ಟು ಹಬ್ಬದ ಪೂರ್ವಭಾವಿ ಸಭೆಯು ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಜರುಗಿತು. 

ಅನಿಸಿ ವ್ಯಕ್ತಪಡಿಸಿದ ಶ್ರೀಕಾಂತ್ ದುಂಡಿಗೌಡ್ರ- ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಿಬೇಕು ಹಾಗೂ ಸಾಧಕರಿಗೆ ಮತ್ತು ಪ್ರತಿಭೆೆಗಳಿಗೆ ಗೌರವಿಸುವ ಕಾರ್ಯ ನಡೆಯಬೇಕು.ಡಾ. ತಿರ್ಲಾಪೂರ- ಮಧುಮೇಹ ಶಿಬಿರವನ್ನು ತಾಲೂಕಿನಲ್ಲಿ ಆಯೋಜಿಸಿ ಮುಂದಿನ 5 ವರ್ಷದಲ್ಲಿಯಾರು ಕಾಲು ಕಳೆದುಕೊಳ್ಳಬಾರದು ಎಂಬ ಉದ್ದೇಶ, ಗಂಗಣ್ಣ ಸಾತಣ್ಣವರ- ಎಲ್ಲ ಶ್ರೀಗಳ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿ, ಸುಭಾಸ ಚವ್ಹಾಣ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮಕ್ಕೆ ಆಗಮಿಸಿಬೇಕು ಅಭಿಮಾನಿಗಳಿಗೆ ನಿರಾಶೆಯಾಗಬಾರದು, ನ್ಯಾಯವಾದಿ ಸಜ್ಜನ-ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರ ನಡೆಯಬೇಕು, ನ್ಯಾಯವಾದಿ ಬೇಂಡಿಗೇರಿ - ಬಸವರಾಜ ಬೊಮ್ಮಾಯಿಯವರ ನಡೆದು ಬಂದ  ದಾರಿಯ ಮೈಲುಗಳ ಬಗ್ಗೆ ವಿಚಾರ ಸಂಕೀರ್ಣ ನಡೆಸಬೇಕು, ಬಸನಗೌಡ್ರ ಮೇಗಿಲಮನಿ- ಪಟ್ಟಣದ ಸಂತೇ ಮೈದಾನದಲ್ಲಿ ಕನಿಷ್ಠ 25 ಸಾವಿರಜನರನ್ನು ಸೇರಿಸಿ ವಿಶೇಷ ಕಾರ್ಯಕ್ರಮ ಮಾಡಬೇಕು, ಗಂಗಾಧರ ಬಾಣದ - ಪಕ್ಷಾತೀತವಾಗಿ, ಜ್ಯಾತತೀತವಾಗಿ  ಎಲ್ಲರನ್ನೂ ಆಹ್ವಾನಿಸಿರಿ ಸವಣೂರನಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ನೀಡಿರಿ, ಅರ್ಜುನ ಹಂಚಿನಮನಿ - 14 ವರ್ಷ ನಿರಂತರ ಅಭಿವೃದ್ಧಿಯಲ್ಲಿ ತೊಡಗಿರುವ ಬೊಮ್ಮಾಯಿಯವರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿರಿ, ಡಾ ಮಲ್ಲೇಶಪ್ಪ ಹರಿಜನ - ವಿಶೇಷವಾಗಿ ಮತ್ತು ವಿಭಿನ್ನವಾಗಿ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡೋಣ, ರೂಪಾ ಬನ್ನಿಕೊಪ್ಪ-ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸೋಣ ಮತ್ತು ಪುರಸಭೆಯಿಂದ ಎಲ್ಲ ರೀತಿಯ ಸಹಕಾರವಿದೆ, ಉಷಾ ಬಿಳಿಕುದರಿ - ಮಹಿಳೆಯರನ್ನು ಪರಿಗಣಿಸಿರಿ, ಡಾ ಶೋಭಾ ನಿಸ್ಸಿಮಗೌಡ್ರ - ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುತ್ತೇವೆ ಹಾಗೂ ಸ್ವಾಗತ ಕಾರ್ಯಕ್ರಮ ಮಹಿಳೆಯರಿಗೆ ಮೀಸಲಿಡಿ, ಪಕ್ಕೀರ​‍್ಪ ಕುಂದೂರ, ಮೋಹನ ಮೆಣಸಿನಕಾಯಿ, ಎಸ್‌.ವಾಯ್‌.ಪಾಟೀಲ, ಕರೆಯಪ್ಪ ಕಟ್ಟಿಮನಿ, ಜಯಣ್ಣಾ ಹೆಸರೂರ, ಮಲ್ಲಿಕಾರ್ಜುನ ಹಡಪದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

 ಶಿವಾನಂದ ಮ್ಯಾಗೇರಿಎಲ್ಲರ ಅನಿಸಿಕೆಗಳನ್ನು ಕ್ರೋಡೀಕರಿಸಿ ಕೊನೆಗೆ ಮಾತನಾಡಿ  ಹರಗುರು ಶ್ರೀ ಗಳನ್ನು ಕರೆಸೋಣ, ಮಾಜಿ ಸಂಸದರು, ಶಾಸಕರು, ಮಾಜಿ ವಿ.ಪ. ಸದಸ್ಯರನ್ನು ಆಹ್ವಾನಿಸೋಣ, ಖ್ಯಾತ ಸಂಗೀತ ಗಾಯಕ ವಿಜಯ ಪ್ರಕಾಶತಂಡದವರಿಂದ ಸಂಗೀತಕಾರ್ಯಕ್ರಮಆಯೋಜನೆ, ಮೃತ್ಯುಂಜಯ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ 400 ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ  ಸಾಂಕೇತಿಕವಾಗಿ, ಬಡರೈತರಿಗೆ ಗೋಧಾನ ಸಾಂಕೇತಿಕವಾಗಿ,  ಕಾಶೀ ವಠುಗಳಿಂದ ವಿಶೇಷ ಪ್ರಾರ್ಥನೆ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೃದ್ದಾಶ್ರಮ, ಅನಾಥಾಶ್ರಮ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಣೆ, ಪ್ರತಿ ಹಳ್ಳಿಗಳಲ್ಲಿ ವಿಶೇಷ ಕುಂಕುಮಾರ್ಚನೆ, ಅಭಿಷೇಕ, ಅನ್ನ ಸಂತರೆ​‍್ಣ ಮಾಡುವುದರ ಬಗ್ಗೆ ಎಲ್ಲ ಅಭಿಮಾನಿಗಳ ಸಮ್ಮುಖದಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. 

ಮಧ್ಯಾಹ್ನ 1 ರಿಂದ 6 ಗಂಟೆಯವರೆಗೆ ಶ್ರೀಗಳ ಸಭಾಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 6 ಗಂಟೆಯಿಂದ ಖ್ಯಾತ ಗಾಯಕ ವಿಜಯ ಪ್ರಕಾಶ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. 

-ಶಿವಾನಂದ ಮ್ಯಾಗೇರಿ 

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿಗಳ ಬಳಗದಎಲ್ಲರೂ ಉಪಸ್ಥಿತರಿದ್ದರು.ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನರಹರಿಕಟ್ಟಿ ವಂದಿಸಿದರು, ರೇಣುಕನಗೌಡ್ರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ