ರಾಷ್ಟ್ರೀಯ

ನನ್ನ ಸಾವಿಗೆ ಪ್ರಾರ್ಥಿಸಿಕೊಂಡು ಪಕ್ಷ ಬಿಟ್ಟು ತೊಲಗಿ : ಮಮತಾ ಆಕ್ರೋಶ

ನನ್ನ ಸಾವಿಗೆ ಪ್ರಾರ್ಥಿಸಿಕೊಂಡು ಪಕ್ಷ ಬಿಟ್ಟು ತೊಲಗಿ : ಮಮತಾ ಆಕ್ರೋಶ

ಕೋಲ್ಕತಾ, ಡಿಸೆಂಬರ್ 5: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದು  ಪಕ್ಷದಲ್ಲಿದ್ದು ಕೊಂಡು  ಒಳಗಿನಿಂದಲೇ  ದುರ್ಬಲಗೊಳಿಸುವ ಬದಲು ಪಕ್ಷ ಬಿಟ್ಟು  ತೊಲಗಬಹುದು ಎಂದು ಗುಡುಗಿದ್ದಾರೆ.

ಪಕ್ಷ ಬಿಟ್ಟು ಹೋಗುವವರು ನನ್ನ ಸಾವಿಗೆ  ಪ್ರಾರ್ಥಿಸಿಕೊಂಡು ಹೋಗಲಿ  ಎಂದೂ  ಬಹಳ ಆಕ್ರೋಶಭರಿತರಾಗಿ ಹೇಳಿದರು.

ಇದಾಗಲೇ ಕೆಲವರು ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಭಾರಿ ಆಕ್ರೋಶಗೊಂಡ ಅವರು  ಪಕ್ಷದ ಶಾಸಕರ   ವಿರುದ್ಧ ಕಿಡಿ ಕಾರಿದ್ದಾರೆ.

ಪ್ರತಿಪಕ್ಷಗಳೊಂದಿಗೆ ಸೇರಿರುವ ಕೆಲ ನಾಯಕರು  ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸುವ ಬದಲು ಪಕ್ಷ ಬಿಟ್ಟು ತೊಲಗುವುದೇ ವಾಸಿ  ಎಂದು ಗುಡುಗಿದರು.

ಪಕ್ಷದ ಮುಖಂಡರ ಜತೆ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ ಮಮತಾ ಈ ರೀತಿ ಹೇಳಿದ್ದಾರೆ. ಸಚಿವ ಸುವೆಂದು ಅಧಿಕಾರಿ ರಾಜ್ಯ ಸಚಿವ ಸಂಪುಟದಿಂದ ಹೊರಬಂದ ಒಂದು ವಾರದ ನಂತರ ಭಾರಿ ಅಸಮಾಧಾನದಿಂದ ಇರುವ ಮಮತಾ, ಯಾರು ಬೇಕಾದರೂ, ಪಕ್ಷ ಬಿಟ್ಟು ಹೋಗಬಹುದು, ನನ್ನದೇನೂ ಅಡ್ಡಿಯಿಲ್ಲ, ಪಕ್ಷದ ಒಳಗೇ ಇದ್ದು, ಇಲ್ಲಸಲ್ಲದ್ದನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಯಾರು -ಯಾರು  ಪಕ್ಷ ಬಿಟ್ಟು ಹೋಗಿದ್ದಾರೆ ಅದರ ಬಗ್ಗೆ ನನಗೆ ಚಿಂತೆ ಇಲ್ಲ, ಅವರನ್ನು ನಾನು ಇಷ್ಟಪಡುವುದೂ ಇಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಪಕ್ಷದ ಒಳಗೆ ಇದ್ದವರು ಹೋರಾಡಬೇಕಿದೆ. ಪಕ್ಷ ವಿರೋಧಿ ಚಟುವಟಿಕೆಗಳನ್ನು ಇನ್ನೂ ಪಕ್ಷ ಸಹಿಸುವುದಿಲ್ಲ. ಅಂಥವರ ವಿರುದ್ಧ ಪಕ್ಷ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದ್ದರಿಂದ ನನಗೂ ಯಾರೂ ಭಯಪಡಬೇಕಿಲ್ಲ, ಇಷ್ಟವಿಲ್ಲದಿದ್ದರೆ ದೂರ ಹೋಗಬಹುದು ಎಂದು ಮಮತಾ ನೇರ  ಎಚ್ಚರಿಕೆ ನೀಡಿದ್ದಾರೆ. 

ಸುದ್ದಿ ಓದಿ