ರಾಣೆಬೆನ್ನೂರ

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಅತ್ಯತ್ತಮ ಕಾರ್ಯಕ್ರಮ- ರವೀಂದ್ರಗೌಡ

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಅತ್ಯತ್ತಮ ಕಾರ್ಯಕ್ರಮ- ರವೀಂದ್ರಗೌಡ

ರಾಣೇಬೆನ್ನೂರು 15: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಶಿಕ್ಷಣ ಇಲಾಖೆಯ ಮೂಲಕ ನಡೆಯುವ ಪ್ರತಿಭಾಕಾರಂಜಿ ಅತ್ಯುತ್ತಮ ಕಾರ್ಯಕ್ರಮವಾಗಿದೆ, 2012ರಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮದಿಂದ ಲಕ್ಷಾಂತರ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಒಂದು ಅತ್ಯುತ್ತಮವಾದ ವೇದಿಕೆಯನ್ನು ಶಿಕ್ಷಣ ಇಲಾಖೆಯೇ ಒದಗಿಸಿಕೊಟ್ಟಿದ್ದು ಮಾದರಿ ಕಾರ್ಯಕ್ರಮಗಳಲ್ಲೊಂದಾಗಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿಕ್ಷಕರ ಜೊತೆ ಕೈ ಜೋಡಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ರೈತ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್ ಪಾಟೀಲ ಹೇಳಿದರು. 

ಅವರು ನಿನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಷ್ಟೂರಿನ ಶಾಲಾ ಆವರಣದಲ್ಲಿ ಜರುಗಿದ ಇಟಗಿ ಕ್ಲಸ್ಟರಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪಠ್ಯ ಶಿಕ್ಷಣದ ಜೊತೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರಾದ ಎಲ್ಲಪ್ಪ ಓಲೇಕಾರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿಕ್ಷಣ ಇಲಾಖೆಯಿಂದ ಸಿ.ಇ.ಓ, ಬನ್ನಿಕೊಡ ಫ್ರ್ರೌಡ ವಿಭಾಗದ ಬಿ.ಆರ್‌.ಪಿ. ನಾಗರಾಜ್ ಎನ್‌. ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಹರಿಹರಗೌಡ ಪಾಟೀಲ, ಪ್ರಗತಿಪರ ರೈತರಾದ ಬಸವನಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಪ್ರಶಾಂತರಡ್ಡಿ ಯರೆಕುಪ್ಪಿ, ಸಿ,ಆರ್‌.ಪಿ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ರವಿಕುಮಾರ ಮುಖ್ಯ ಶಿಕ್ಷಕರಾದ ರಾಜಶೇಖರ, ಕೆ.ಟಿ.ರಾಧಾ ಮೆಡಮ್, ಮಣಕೂರು ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರಾದ ಅಜ್ಜಪ್ಪ ಹೊಸಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  

ಶಿಕ್ಷಕರ ದಿನಾಚಣೆಯ ನಿಮಿತ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ‘7’ ಶಾಲೆಗಳ ಶಿಕ್ಷಕರಿಗೆ, ಶಿಕ್ಷಕಿಯರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮದ ವತಿಯಿಂದ ಸತ್ಕರಿಸಿ ಗೌರವಿಸಲಾಗಯಿತು. ನಂತರ ಜಯಶಾಲಿ ಮಕ್ಕಳಿಗೆ ಗಣ್ಯಾತಿಗಣ್ಯರ ಅಮೃತಹಸ್ತದಿಂದ ಪ್ರಶಸ್ತಿಪತ್ರ ವಿತರಿಸಲಾಯಿತು.  

ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕರಾದ ನಾಗರಾಜ ಬಿಳಸೂರಮಠ ನೆರವೇರಿಸಿದರೆ, ನಿರೂಪಣೆಯನ್ನು ಶಿಕ್ಷಕರಾದ ಬಸವರಾಜ ಕಾಯಕದರವರು ಸೊಗಸಾಗಿ ನಿರೂಪಿಸಿದರು.  

ಸುದ್ದಿ ಓದಿ