ಬಿಗಡಾಯಿಸಿದ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ
ನವದೆಹಲಿ, ಆಗಸ್ಟ್ 31: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹಸ್ಥಿತಿ ಗಂಭೀರವಾಗಿದ್ದು, ಶ್ವಾಸಕೋಶದ ಸೋಂಕು ಉಲ್ಬಣಿಸಿದೆ ಎಂದು ಆರ್ ಮತ್ತು ಆರ್ ಆಸ್ಪತ್ರೆ ತಿಳಿಸಿದೆ.
ಮುಖರ್ಜಿ ಅವರ ಮೂತ್ರಪಿಂಡದ ಸ್ಥಿತಿ ಕೂಡ ಬಿಗಡಾಯಿಸಿದೆ. ಅವರಿನ್ನೂ ಆಳವಾದ ಕೋಮಾದಲ್ಲಿದ್ದು, ವೆಂಟಿಲೇಟರ್ ನೆರವಿನಿಂದಲೇ ಉಸಿರಾಡುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮುಖರ್ಜಿ ಅವರು ಆ. 10ರಂದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೋವಿಡ್ ಸೋಂಕುದ ದೃಢಪಟ್ಟಿತ್ತು.