ಛಲವಾದಿ ಮಹಾಸಭಾತಾಲೂಕ ಅಧ್ಯಕ್ಷರಾಗಿ ಪ್ರಮೋಧ ಚಲವಾದಿ ಆಯ್ಕೆ
ಶಿಗ್ಗಾವಿ 21: ತಾಲೂಕಿನ ಛಲವಾದಿ ಮಹಾಸಭಾ ಅಧ್ಯಕ್ಷರಾಗಿ ಬಂಕಾಪುರ ಗ್ರಾಮದ ಪ್ರಮೋದ ಚಲವಾದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪಟ್ಟಣದಅಂಬೇಡ್ಕರ್ ಭವನದಲ್ಲಿ ನಡೆದಆಯ್ಕೆ ಸಮಿತಿಯ ಸಭೆಯಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಮಲ್ಲೆಶಪ್ಪ ಮದ್ಲೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲು ಛಲವಾದಿ ಸಮುದಾಯದ ಸಂಘಟನೆ ಪ್ರಾರಂಭವಾಗಿದ್ದು ಹಾವೇರಿ ಜಿಲ್ಲೆಯಿಂದಲೇ ಎನ್ನುವುದು ಹೆಮ್ಮೆಯ ವಿಷಯ ನಮ್ಮ ಸಮುದಾಯದಲ್ಲಿರುವವರು ಅತಿ ಹೆಚ್ಚು ಕೂಲಿಕಾರ್ಮಿಕ ಕುಟುಂಬದವರಾಗಿದ್ದು ಅಂತಹ ಕುಟುಂಬಗಳ ಸವಾಂರ್ಗೀಣ ಅಭಿವೃದ್ಧಿ ಗೆಛಲವಾದಿ ಮಹಾಸಭಾ ದಾರೀದೀಪವಾಗಿ ಕೆಲಸ ಮಾಡಬೇಕು ಎಂದರು.
ಹಿರಿಯಛಲವಾದಿ ಮುಖಂಡ ಎಂ.ಬಿ.ಕಾಳೆ ಅವರು ಮಾತನಾಡಿ ಪ್ರಮೋಧ ಚಲವಾದಿ ಅವರನ್ನು ಆಯ್ಕೆ ಮಾಡಿದ್ದು ಸಂತೋಷವಾಗಿದೆ ಮುಂದಿನ ದಿನಗಳಲ್ಲಿ ತಾಲೂಕಿನ ಸಮುದಾಯದವರ ಕಷ್ಟಕ್ಕೆ ಬೆನ್ನೆಲುಬಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷರಾಗಿದ್ದ ಶರೀಫ ಮಾಕಪ್ಪನವರ ಅವರು ಮಾತನಾಡಿ ಛಲವಾದಿ ಮಹಾಸಭಾತಾಲೂಕ ಅಧ್ಯಕ್ಷನಾಗಿ ನನಗೆ ತೋಚಿದಷ್ಟು ಸಮುದಾಯದ ಕೆಲಸ ಮಾಡಿದ್ದೆನೆ ಅನೇಕ ಕಾರ್ಯಗಳ ಒತ್ತಡದ ಮಧ್ಯ ಸಮುದಾಯದ ಕೆಲಸ ಮಾಡಲು ಸಮಯ ನೀಡಲು ಸಾಧ್ಯವಾಗುತಿದ್ದಿಲ್ಲ ಹಾಗಾಗಿ ಬೆರೆಯವರಿಗೆ ಸೇವೆಗೆ ಅವಕಾಶ ಸಿಗಲಿ ತಾಲೂಕಿನಲ್ಲಿ ಸಮುದಾಯ ಸಂಘಟನೆಯಾಗಲಿ ಎಂಬ ಉದ್ದೇಶದಿಂದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದರು.
ತಾಲ್ಲೂಕಅಧ್ಯಕ್ಷ ಪ್ರಮೋದ ಚಲವಾದಿ ಅವರು ಮಾತನಾಡಿ ತಾಲೂಕಿನಲ್ಲಿ ಸುಮಾರು 16 ಹಳ್ಳಿಗಳಲ್ಲಿ ಸಮುದಾಯದ ಬಾಂಧವರಿದ್ದು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಮುದಾಯದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಛಲವಾದಿ ಮಹಾಸಭಾ ಜಿಲ್ಲಾಗೌರವಾಧ್ಯಕ್ಷ ಶಂಭು ಕಳಸದ ಕಾರ್ಯದರ್ಶಿ ಚಂದ್ರ್ಪ ಸನದಿ ಹಿರಯ ಮುಖಂಡರಾದ ಮಂಜುನಾಥ ಮಿಲಗನವರ ಶಂಕರ ಇಂಗಳಗಿ ತಾಲ್ಲೂಕ ಕಾರ್ಯದರ್ಶಿ ವಿರೇಶ ಕಾಳೆ ಮಾತನಾಡಿದರು.
ಸತೀಶ ಕಾಟೇನಳ್ಳಿ, ಅಶೋಕ ಕಾಳೆ, ನೀಲವ್ವ ಕಾಲವಾಡ, ಹನಮಂತಪ್ಪ ಕಾಳೆ, ಮಹೇಶ ಕಳಸದ, ನೀಲಪ್ಪ ಬನ್ನೂರ, ನಿಂಗಪ್ಪ ಬನ್ನೂರ, ವಿಶ್ವನಾಥ ಹಾಗಲೂರ, ನಿಂಗಪ್ಪ ಡೊಳ್ಳೆಶ್ವರ, ಮಾಲತೇಶ ಮಾಕಾಪುರ, ಗುಡ್ಡಪ್ಪ ಕಾಳೆ, ಬಸಪ್ಪದೊಡ್ಡಮನಿ, ಶಿವಪುತ್ರ್ಪ ಚಲವಾದಿ, ಕುಶಾಲ ಕಾಳೆ ಹಾಗೂ ಇತರರು ಹಾಜರಿದ್ದರು.