ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
ನವದೆಹಲಿ, ನವೆಂಬರ್ 28: ಭಾರತ ಹವಾಮಾನ ಬದಲಾವಣೆ ಜ್ಞಾನ
ಪೋರ್ಟಲ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಚಾಲನೆ ನೀಡಿದ್ದಾರೆ.
ಹವಾಮಾನ
ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ
ಎಲ್ಲಾ ಪ್ರಮುಖ ಕ್ರಮಗಳನ್ನು ಈ ಪೋರ್ಟಲ್ ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಾವಡೇಕರ್, ಇದು ಏಕ-ಹಂತದ ಮಾಹಿತಿ ಸಂಪನ್ಮೂಲವಾಗಿದ್ದು, ಸಂಬಂಧಿತ ಸಚಿವಾಲಯಗಳು ತೆಗೆದುಕೊಂಡ ವಿವಿಧ ಹವಾಮಾನ ಉಪಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದದ ನಂತರದ ಹವಾಮಾನ ಕ್ರಮಗಳಿಗೆ ಸಂಬಂಧಿಸಿದಂತೆ ಭಾರತ, 2020 ರ ಪೂರ್ವದ ಹವಾಮಾನ ಕ್ರಿಯಾ ಗುರಿಗಳನ್ನು ಪ್ರಾಯೋಗಿಕವಾಗಿ ಸಾಧಿಸಿದೆ ಎಂದ ಜಾವಡೇಕರ್, ವಾಮಾನ ವೈಪರೀತ್ಯಕ್ಕೆ ಭಾರತ ಜವಾಬ್ದಾರಿಯಲ್ಲದಿದ್ದರೂ ಸವಾಲನ್ನು ತಗ್ಗಿಸಲು ಜವಾಬ್ದಾರಿಯುತ ಕ್ರಮ ಕೈಗೊಳ್ಳುತ್ತಿದೆ.. ಕ್ಯೋಟೋ ಒಪ್ಪಂದದ ಬದ್ಧತೆಗಳಿಗೆ ಇತರ ದೇಶಗಳು ಬದ್ಧವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.