ರಾಷ್ಟ್ರೀಯ

ಶ್ರೀನಗರ- ಬಾರಾಮುಲ್ಲ ಹೆದ್ದಾರಿಯಲ್ಲಿ ಶಕ್ತಿಯುತ ಸ್ಫೋಟಕ ಪತ್ತೆ; ಬಹುದೊಡ್ಡ ಅಪಾಯದಿಂದ ಪಾರು

ಶ್ರೀನಗರ- ಬಾರಾಮುಲ್ಲ ಹೆದ್ದಾರಿಯಲ್ಲಿ ಶಕ್ತಿಯುತ ಸ್ಫೋಟಕ ಪತ್ತೆ; ಬಹುದೊಡ್ಡ ಅಪಾಯದಿಂದ ಪಾರು

ಶ್ರೀನಗರ, ಸೆ 14: ಜಮ್ಮು ಕಾಶ್ಮೀರದ ಶ್ರೀನಗರ-ಬಾರಮುಲ್ಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ಇರಿಸಿದ್ದ ಶಕ್ತಿಯುತ ಸುಧಾರಿತ ಸ್ಫೋಟಕ ಸಾಧನ (ಐಎಡಿ) ಅನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವ ಮೂಲಕ ರೋಡ್‌ ಓಪನಿಂಗ್‌ ಪಾರ್ಟಿ (ಆರ್‌ಒಪಿ) ಎಚ್ಚರಿಕೆಯ ತಂಡ ಬಹುದೊಡ್ಡ ಅಪಾಯವನ್ನು ತಪ್ಪಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್‌ಒಪಿ ಸಿಬ್ಬಂದಿಯ ದಿನನಿತ್ಯದ ಗಸ್ತು ತಿರುಗುವ ವೇಳೆ ಪಟ್ಟಾಣ್‌ ರಸ್ತೆ ಬದಿಯಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ್ದರು. ತಕ್ಷಣ ಎರಡೂ ದಿಕ್ಕಿನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ನಂತರ ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ, ಐಇಡಿಯನ್ನು ನಿಷ್ಕ್ರಿಯಗೊಳಿಸಿತ್ತು. ಇದನ್ನು ಪತ್ತೆ ಹೆಚ್ಚದಿದ್ದರೆ ದೊಡ್ಡ ಪ್ರಮಾಣದ ಸಾವು ನೋವು ಸಂಭವಿಸುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ,  ಭದ್ರತಾ ಪಡೆಗಳು ಡ್ರೋನ್‌ ಬಳಸಿ ಸುತ್ತಮುತ್ತಲಿನ ಪ್ರದೇಶಗಳ ಪರಿಶೀಲನೆ ನಡೆಸಿದವು.

ಇದು ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಪತ್ತೆಯಾಗಿರುವ ಮೂರನೇ ಐಇಡಿಯಾಗಿದೆ.


ಸುದ್ದಿ ಓದಿ