ಶಿಗ್ಗಾವ್

ಪೋಷಣ ಅಭಿಯಾನ ಪೋಷಕ ಶಿಬಿರ ಕಾರ್ಯಕ್ರಮ

ಪೋಷಣ ಅಭಿಯಾನ ಪೋಷಕ ಶಿಬಿರ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ 19: ತಾಲೂಕಿನ ಹಿರೇಮನಕಟ್ಟಿ ಗ್ರಾಮದಲ್ಲಿನ ಮುರಗೇಂದ್ರ ಮಹಾಸ್ವಾಮಿಗಳು ಮಠದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಗ್ಗಾವಿ ಇವರ ವತಿಯಿಂದ ಪೋಷಣ ಅಭಿಯಾನ ಪೋಷಕ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಹಿರೇಮಣಕಟ್ಟಿಯ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು. 

ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ ಹಾಗೂ ಪೋಷಣೆ ಬಗ್ಗೆ ಮಾಹಿತಿಗಳನ್ನು ಒದಗಿಸಲಾಯಿತು. ಹಿರೇಮಣಕಟ್ಟಿ, ಚಿಕ್ಕಮಣಕಟ್ಟಿ, ಬೆಳಗಲಿಯ ಮೂರು ಅಂಗನವಾಡಿಯ ಕಾರ್ಯಕರ್ತರು ಅಡುಗೆ ಸಹಾಯಕರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ರಜಿನಿ ಹುರಳಿಕೊಪ್ಪಿ,  ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗವ್ವ ಹೊಲಸೋಗಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ