ಶಿಗ್ಗಾವ್

ಕಟ್ಟಡಗಳ ಕಳಪೆ ಕಾಮಗಾರಿ: ಸರಿಪಡಿಸುವಂತೆ ಆಗ್ರಹ

ಕಟ್ಟಡಗಳ ಕಳಪೆ ಕಾಮಗಾರಿ: ಸರಿಪಡಿಸುವಂತೆ ಆಗ್ರಹ

ಲೋಕದರ್ಶನ ವರದಿ

ಶಿಗ್ಗಾವಿ 19:  ತಾಲೂಕಿನ ಬಂಕಾಪುರ ಪಟ್ಟಣದ ಸರಕಾರದ ರಾಜೀವ್ಗಾಂಧಿ ವಸತಿಯೋಜನೆ ಅಡಿ ಜಿ ಪ್ಲಸ್ಒನ್ ಬಡವರ ಮನೆಗಳ ಉದ್ಘಾಟನೆಯಾಗಿದ್ದು ಕಟ್ಟಡಗಳ ಕಳಪೆ ಕಾಮಗಾರಿ ಮಾಡಿದ್ದು ಹಾಗೂ ಮನೆಗಳಿಗೆ ವಿದ್ಯುತ್ ಒದಗಿಸಿ ಸರಿಪಡಿಸಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ವಿತರಿಸಬೇಕು ಶಾಸಕ ಬೊಮ್ಮಾಯಿ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಮಂಜುನಾಥ್ ಮಣ್ಣಣ್ಣವರ್ ಆಗ್ರಹ ಮಾಡಿದ್ದಾರೆ.

ಬಹು ವರ್ಷಗಳಿಂದ ಬಂಕಾಪುರ ಪಟ್ಟಣದಲ್ಲಿ ಬಡವರ ಕನಸಿನ ಸರ್ಕಾರದ ರಾಜೀವ್ಗಾಂಧಿ ವಸತಿಯೋಜನೆ ಅಡಿ ಜಿ ಪ್ಲಸ್ಒನ್ ವಸತಿ ಕಟ್ಟಡಗಳನ್ನು ನಿರ್ಮಿಸಿದ್ದು ಕಟ್ಟಡದ ನಿಮರ್ಾಣ ಸಂಪೂರ್ಣ ಕಳಪೆಯಿಂದ ಕೂಡಿದ್ದು ಅದಾಗಿಯೂ ಕೇವಲ ಐದಾರು ಜನರಿಗೆ ತರಾತುರಿಯಲ್ಲಿ ಉದ್ಘಾಟಿಸಿ ಹಕ್ಕುಪತ್ರ ನೀಡಿದ್ದೀರಿ ಆದರೆ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಕಟ್ಟಡಗಳು ಈಗಲೇ ಮಳೆಯಿಂದ ಸೋರುತ್ತಿದ್ದು ಸಮರ್ಪಕ ರಸ್ತೆಗಳಿಲ್ಲ  ಕಳಪೆ ಕಾಮಗಾರಿ ಸ್ಪಷ್ಟವಾಗಿಕಾಣುತ್ತಿದೆ ಶಾಸಕರು  ಕಟ್ಟಡಗಳ ಗುಣಮಟ್ಟ ಪರಿಶೀಲನೆ ಮಾಡದೆ ಹಕ್ಕು ಪತ್ರ ವಿತರಿಸಿರುವುದು ಸರಿಯಲ್ಲ ಇದು ಜನರಿಗೆ ಅನ್ಯಾಯ ಮಾಡಿದಂತಾಗಿದೆ ಕೂಡಲೇ ಕಳಪೆ ಕಾಮಗಾರಿಗಳನ್ನು ಸರಿಪಡಿಸಿ ವಿದ್ಯುತ್ ಒದಗಿಸಿ  ಎಲ್ಲ ಫಲಾನುಭವಿಗಳಿಗೂ ಮನೆ ಹಸ್ತಾಂತರ ಮಾಡುವ ಕೆಲಸ ಮಾಡಬೇಕು ತರಾತುರಿಯಲ್ಲಿ ನೀವು ಉದ್ಘಾಟನೆ ಮಾಡಿದ ಕಾರ್ಯಕ್ರಮ ನಾಳೆ ಸರಕಾರದ ಮೇಲೆ ಕೆಟ್ಟ ಹೆಸರು ಬರಬಹುದು ತಕ್ಷಣವೇ ಸರಿಪಡಿಸುವಂತೆ ಮಂಜುನಾಥ್  ಆಗ್ರಹಿಸಿದ್ದಾರೆ 

ಸುದ್ದಿ ಓದಿ