ಸಂಕೇಶ್ವರದಲ್ಲಿ ಕಳಪೆ ಕಾಮಗಾರಿ : 15 ದಿನಗಳಲ್ಲಿ ಕುಸಿತ ಕಂಡ ರಸ್ತೆ
ಲೋಕದರ್ಶನ ವರದಿ
ಸಂಕೇಶ್ವರ 21: ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ಕಳೆದ 15 ದಿನಗಳ ಹಿಂದಷ್ಟೇ ನೂತನವಾಗಿ ನಿರ್ಮಿಸಲಾದ ಹಳೆ ಪಿಬಿ ರಸ್ತೆಯ ಒಳಚರಂಡಿ ಮೇಲೆ ಹಾಕಲಾದ ಸ್ಲ್ಯಾಬ್ ಕಿತ್ತು ಬೃಹತ್ ಆಕಾರದ ಗುಂಡಿ ಬಿದ್ದಿರುವದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಕೇಶ್ವರ ನಗರದ ಚನ್ಮಮ್ಮ ವೃತ್ತದ (ಸರ್ಕಲ್) ಬಳಿಯ ಅಂಚೆ ಕಚೇರಿ ಮುಂದೆ ಹಳೆ ಪಿಬಿ ರಸ್ತೆಯಲ್ಲಿನ ಒಳಚರಂಡಿ ಮೇಲೆ ಕಳೆದ 15 ದಿನಗಳ ಹಿಂದೆ ಹಾಕಲಾದ ಸ್ಲ್ಯಾಬ್ ಕಿತ್ತು ಗುಂಡಿ ನಿರ್ಮಾಣವಾಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ನೂತನವಾಗಿ ನಿರ್ಮಿಸಲಾಗಿರುವ ಈ ಒಳಚರಂಡಿ ಮೇಲಿನ ರಸ್ತೆಯು ಸಾರ್ವಜನಿಕರಿಗೆ ಲೋಕಾರೆ್ಣ ಆಗಿ 15 ದಿನಗಳು ಕೂಡಾ ಆಗಿಲ್ಲ. ಆದರೆ ಈ ಕಳಪೆ ಕಾಮಗಾರಿಯಿಂದ ರೋಸಿ ಹೋಗಿರುವ ನಾಗರಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.