ಕಳಪೆ ಕಾಮಗಾರಿ: ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೈಲಹೊಂಗಲ 20: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳು ಸಿಮೆಂಟ್ ಕಾಂಕ್ರೀಟ್ ಕಾಮಗಾರಿ ಕೈಗೊಂಡ ಒಂದೇ ವರ್ಷದಲ್ಲಿ ಕಿತ್ತು ಹೊಗುತ್ತಿರುವುದಕ್ಕೆ ವಾರ್ಡಿನ ನಾಗರೀಕರು ಕಾಮಗಾರಿ ನಿರ್ವಹಣೆ ಮಾಡಿದ ಲ್ಯಾಂಡ ಆರ್ಮಿ ಅಧಿಕಾರಿಗಳ, ಗುತ್ತಿಗೆದಾರನ ವಿರುದ್ಧ ದಿನನಿತ್ಯ ಹಿಡಿಶಾಪ ಹಾಕಿ ಸಂಚರಿಸುವಂತಾಗಿದೆ.
ಕಳೆದ ಒಂದು ವರ್ಷಗಳ ಹಿಂದೆ ಲಕ್ಷಾಂತರ ರೂ ವೆಚ್ಚ ಮಾಡಿ ಕಾಂಕ್ರಿಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಕೈಗೊಂಡ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟು ತಗ್ಗು ದಿನ್ನೆಗಳಾಗಿ ಮಾರ್ಪಾಡಾವಾಗುತ್ತಿವೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ಗುತ್ತಿಗೆದಾರರ ಇಎಂಡಿ ಹಣದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಭರವಸೆ ನೀಡುತ್ತಲೇ ಇದ್ದಾರೆ ವಿನಃ ಗುತ್ತಿಗೆದಾರನ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹಿಂದೇಟು ಹಾಕುತ್ತಿದ್ದಾರೆ.
ಕೊರ್ಟ ಪಕ್ಕದ ವಿನಾಯಕ ನಗರ, ಪ್ರಭುನಗರ 2,5,6ನೇ ಕ್ರಾಸ, ಹರಳಯ್ಯ ಕಾಲನಿ ರಸ್ತೆಯ ಉದ್ದಕ್ಕೂ ತಗ್ಗುದಿನ್ನೆಗಳಿಂದ ಬೈಕ, ವಾಹನ ಸವಾರರ ಮೈಕೈ, ಬೆನ್ನುನೋವಿನಿಂದ ಬಳಲುವಂತಾಗಿ ಆಸ್ಪತ್ರೆಗೆ ಸಾವಿರಾರು ರೂ ಸುರಿಯುವಂತಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಅವರು ಪುರಸಭೆ ಕಾರ್ಯವೈಖರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹರಳಯ್ಯ ಕಾಲನಿಯಲ್ಲಿ ಸಮರ್ಪಕವಾದ ಗಟಾರು ಇಲ್ಲದೇ ತ್ಯಾಜ್ಯವಸ್ತು, ಕಸಕಡ್ಡಿ ಬೆಳೆದು ನಿಂತು, ನ್ಯಾಯಾಲಯಕ್ಕೆ ಆಗಮಿಸುತ್ತಿರುವವರನ್ನು ದುರ್ಗಂದ ವಾಸನೆಯಿಂದ ಸ್ವಾಗತಿಸುವಂತಾಗಿದೆ. ಕಳೆದ ಹತ್ತಾರು ವರ್ಷಗಳಿಂದ ರಸ್ತೆ, ಗಟಾರು ವಾಸನೆಯಿಂದ ಜನತೆ ರೊಸಿಹೊಗಿದ್ದಾರೆ. ಅಲ್ಲದೆ ಪಟ್ಟಣದ ಮಡಿವಾಳೇಶ್ವರ ದೇವಸ್ಥಾನದ ಹತ್ತಿರದ ರಸ್ತೆ, ಸಮರ್ಪಕವಾದ ಗಟಾರು ಇಲ್ಲದ ಕಾರಣ ಚರಂಡಿ ನೀರು ಸರಾಗವಾಗಿ ಸಾಗದೇ ರಸ್ತೆ ಮೇಲೆ ಹರಿದಾಡಿ, ಗಬ್ಬೆದ್ದು ನಾರುತ್ತಿದ್ದು ರೋಗ ರುಜಿನಗಳಾದ ತಾಣವಾಗಿದೆ.
ಜನತೆ ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಸಂಬಂಧಪಟ್ಟ ಮೇಲಾಧಿಕಾರಿಗಳು ಗುತ್ತಿಗೆದಾರ, ಅಧಿಕಾರಿಗಳ ಮೇಲೆ ಇರುವ ಇಲಾಖಾ ಪ್ರೇಮವನ್ನು ಬದಿಗಿರಿಸಿ ರಸ್ತೆ ಕಾಮಗಾರಿಯನ್ನು ಖುದ್ದಾಗಿ ಭೇಟಿ ನೀಡಿ ಪರೀಶಿಲಿಸಿ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ಕೊವಿಡ್-19 ಸೊಂಕು ಮತ್ತು ಭಾರಿಮಳೆ ವಿಪತ್ತಿನಿಂದ ಸಾವಿರಾರು ಕೋಟಿ ಸರ್ಕಾರಕ್ಕೆ ಹಾನಿಗಿಡಾಗಿ, ಆರ್ಥಿಕ ಪರಿಸ್ಥಿತಿ ಸಂಕಷ್ಟದ ಮಧ್ಯದಲ್ಲಿಯೂ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರು ಗುತ್ತಿಗೆದಾರ ಕಳಪೆ ಮಟ್ಟದ ಕಾಮಗಾರಿ ಕೈಗೊಳ್ಳತ್ತಿದ್ದರು ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದು ಭ್ರμÁ್ಟರಕ್ಕೆ ಹಿಡಿದ ಕೈಗನ್ನಡಿಯಾಗಿದೆ
-ಗುಂಡಪ್ಪ ಸನದಿ ಸಾಮಾಜಿಕ ಕಾರ್ಯಕರ್ತ
ಹರಳಯ್ಯ ಕಾಲನಿ ಇದರ ಪಕ್ಕದಲ್ಲಿ ನ್ಯಾಯಾಲಯ, ಪೋಲೀಸ ಇಲಾಖೆ ಕಛೇರಿಗಳಿದ್ದು ದಿನನಿತ್ಯ ನೂರಾರು ನಾಗರೀಕರು ಬರುತ್ತಾರೆ ಈ ರಸ್ತೆ ಉದ್ದಕ್ಕೂ ಹಂಪಗಳಾಗಿವೆ, ಗಟಾರು ಸ್ವಚ್ಛತೆ ಕಾಣದೇ ತ್ಯಾಜ್ಯ, ಕಸಕಡ್ಡಿಗಳ ಸಂಗ್ರಹ ತಾಣವಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ
-ಶ್ರೀಶೈಲ ಕಟ್ಟಿಮನಿ, ನಾಗರೀಕ
ಬಸ್ ನಿಲ್ದಾಣದ ಅಕ್ಕಪಕ್ಕ ರಸ್ತೆಗಳು ಬೇರೆ ಇಲಾಖೆಯ ನಿರ್ವಹಣೆಯಲ್ಲಿ ಕೈಗೊಂಡಿದ್ದು, ಅವುಗಳನ್ನು ಪರೀಶಿಲಿಸಿ ಕಳಪೆ ಕಾಮಗಾರಿ ಎಂದು ಕಂಡು ಬಂದಲ್ಲಿ ಗುತ್ತಿಗೆದಾರನ ಇಎಂಡಿ ಹಣದಲ್ಲಿ ರಸ್ತೆ ದುರಸ್ತಿಗೆ ಕ್ರಮ ಜರುಗಿಸಲಾಗವುದು ಹಾಗೂ ಹರಳಯ್ಯ ಕಾಲೋನಿ, ಪ್ರಭು ನಗರ, ಮಡಿವಾಳೇಶ್ವರ ನಗರ ರಸ್ತಗೆಳಿಗೆ ನಗರೋತ್ತಾನ ಯೋಜನೆಯಡಿ ಪ್ರಸ್ತಾವಣೆ ಸಲ್ಲಿಸಲಾಗಿದೆ.
-ಕೆ.ಆಯ್.ನಾಗನೂರ ಪುರಸಭೆ ಮುಖ್ಯಾಧಿಕಾರಿ