ಕಳಪೆ ಮಟ್ಟದ ರಸ್ತೆ ಮತ್ತು ಫುಟ್ ಪಾತ ಕಾಮಗಾರಿ: ಕ್ರಮಕ್ಕೆ ಒತ್ತಾಯ
ಮಾಂಜರಿ 07: ಸಮೀಪದ ಸದಲಗಾ ಪಟ್ಟಣದ ಶೆಟ್ಟಿ ಹಳ್ಳಿ ಎಸ್.ಎಚ್ 78 ರಾಜ್ಯ ಹೆದ್ದಾರಿ ರಸ್ತೆಯನ್ನು ಪಿ.ಡ್ಬ್ಯೂ.ಡಿ ಇಲಾಖೆ ವತಿಯಿಂದ ಸನ್ 2022/23 ಸಾಲಿನಲ್ಲಿ ಸದಲಗಾ ಬಸ್ ನಿಲ್ದಾಣ ದಿಂದ ದತ್ತವಾಡ ರಸ್ತೆ ವರಗೆ ಶಾಲಾ ಮಕ್ಕಳ ಸುರಕ್ಷತೆ ಸಲುವಾಗಿ ರಸ್ತೆ ಮತ್ತು ಫುಟ್ ಪಾತ ಕಾಮಗಾರಿ ಸಲುವಾಗಿ ಸರಕಾರದಿಂದ 5.20 ಕೂಟಿ ರೂಗಳ ಅನುದಾನ ಮಂಜೂರಾಗಿದ್ದು. ರಸ್ತೆ ಕಾಮಗಾರಿ ಮುಕ್ತಾಯಗೊಂಡಿದ್ದು, ಫೂಟಪಾತ್ ಕಾಮಗಾರಿ ಚಾಲನೆಯಲ್ಲಿ ಇದ್ದು, ರಸ್ತೆ ಕಾಮಗಾರಿ ಮುಗಿದು ಎರಡು ತಿಂಗಳ ಮಾತ್ರ ಆಗಿದ್ದು ಅಷ್ಟರಲ್ಲೇ ರಸ್ತೆಯ ಮೇಲೆ ಗುಂಡಿ (ತೆಗ್ಗು ) ಬಿದ್ದಿರುತದೆ, ಅಂದರೆ ರಸ್ತೆ ಕಾಮಗಾರಿ ಕಳಪೆ ಮಟ್ಟದಾಗಿದ್ದು, ಶಾಲಾ ಮಕ್ಕಳ ಸುರಕ್ಷತೆ ಸಲುವಾಗಿ ಫುಟ್ ಪಾತ ಕಾಮಗಾರಿ ಚಾಲತಿಯಲ್ಲಿ ಇದ್ದು, ಫುಟ್ ಪಾತ ಮಧ್ಯದಲ್ಲಿ ಹಾಯ್ ಹೋಲಟೆಜ ವಿದ್ಯುತ್ ಟಿಸಿ ಗಳಿದ್ದು ಸಂಬಂಧಿಸಿದ ಅಧಿಕಾರಿಗಳು ಅದರ ಬಗ್ಗೆ ಯಾವುದೇ ಪೂರ್ವ ನೀಯೊಜನೆಯಿ ಲ್ಲದೆ ಫುಟ್ ಪಾತ ನಿಮರ್ಿಸಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಘಡಿಸಿದಲ್ಲಿ ಅದಕ್ಕೆ ಹೊಣೆಗಾರ ಯಾರು?
ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲಾ, 5.20 ಕೋಟಿ ರೂ ಖಚರ್ು ಮಾಡಿ ಕಳಪೆ ಮಟ್ಟದ ರಸ್ತೆ ಮತ್ತು ಫುಟ್ ಪಾತ ಕಾಮಗಾರಿ ಮಾಡುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಸದರೀ ಕಾಮಗಾರಿ ಪರಿಶೀಲನೆ ಮಾಡಿ, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸದಲಗಾ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಮೋಹನ ಹೇಗ್ರೆ ಒತ್ತಾಯಿಸಿದ್ದಾರೆ.