ಲೂಟಿಯಾಗುತ್ತಿರುವ ಮರಳು ಸಂಪತ್ತನ್ನು ಉಳಿಸದಿದ್ದರೆ ಪರಿಸರ ವಾದಿಗಳಿಂದ ಮತದಾನದ ಬಹಿಷ್ಕಾರ : ಪಾಟೀಲ ಎಚ್ಚರಿಕೆ
ಲೋಕದರ್ಶನ ವರದಿ
ರಾಣೇಬೆನ್ನೂರು 27: ಜಿಲ್ಲಾಡಳಿತ ಮರಳುಗಳ್ಳರೊಂದಿಗೆ ಶ್ಯಾಮಿಲಾಗಿ ಏನೂ ಗೊತ್ತಿಲ್ಲದ ರೀತಿಯಲ್ಲಿ ನಾಟಕವಾಡುತ್ತ 24*7 ರೀತಿಯಲ್ಲಿ ಎಗ್ಗಿಲ್ಲದೆ ತಾಲೂಕಿನ ತುಂಗಭದ್ರಾ ನದಿ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತಿದ್ದು ಹಗಲಿನಲ್ಲಿ 1 ಮರಳು ಪಮರ್ಿಟ್ನಲ್ಲಿ 4 ಟ್ರಿಪ್ಗಳನ್ನು ಒಳ ಒಪ್ಪಂದಂತೆ ಲೂಟಿ ಹೊಡೆದರೆ ಇಡೀ ರಾತ್ರಿ ಮ್ಯಾಚ್ ಫಿಕ್ಸಿಂಗ್ನೊಂದಿಗೆ ಅಕ್ರಮ ಮರಳನ್ನು ಲೂಟಿ ಹೊಡೆಯುತ್ತಿದ್ದು ಚುನಾವಣೆ ಅಕ್ರಮಗಳನ್ನು ತಡೆಗಟ್ಟಲೆಂದೆ ಇರುವ ಚಕ್ಪೋಸ್ಟ್ಗಳ ಮುಖಾಂತರವೇ ಲಾರಿಗಳು ಪಾಸಾಗುತ್ತಿದ್ದು ಇವುಗಳನ್ನು ತಡೆಯುವ ಅಧಿಕಾರ ಈ ಚಕ್ಕಪೋಸ್ಟ್ಗಳಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಲೂಟಿಯಾಗುತ್ತಿರುವ ಪರಿಸರ ಸಂಪತ್ತನ್ನು ಉಳಿಸಿದಿದ್ದರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದೆಂದು ರೈತ ಮುಖಂಡ, ಪರಿಸರವಾದಿ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.
ಅವರು ಇಂದು ನಗರದಲ್ಲಿ ರೈತ ಮುಖಂಡರು ಮತ್ತು ಪರಿಸರ ಪ್ರೇಮಿಗಳೊಂದಿಗೆ ಪ್ರತಿಕಾಗೋಷ್ಠಿ ನಡೆಸಿ ಚುನಾವಣೆಯ ಈ ಸಂದರ್ಭವನ್ನೇ ಸುಗ್ಗಿ ಯನ್ನಾಗಿ ಮಾಡಿಕೊಂಡಿರುವ ಸಂಬಂಧಿಸಿದ ಅಧಿಕಾರಿಗಳು ಮರಳುಗಳ್ಳರು ಜಿಲ್ಲಾ ಟಾಸ್ಕಪೋರ್ಸ ಸಮಿತಿಯವರು ಸೇರಿ ಪ್ರತಿ ಚುನಾವಣಾ ಸಮಯದಲ್ಲಿ ಇಂತಿಷ್ಟೇ ಲೂಟಿ ಮಾಡಬೇಕೆಂದು ಚುನಾವಣಾ ಪೂರ್ವದಲ್ಲಿಯೇ ಲೆಕ್ಕಾಚಾರ ಹಾಕಿಕೊಂಡು ಲೂಟಿ ಹೊಡೆಯುತ್ತಾ ಜಾಣ ಕಿವುಡರಂತೆ ವತರ್ಿಸುತ್ತಿರುವ ಜಿಲ್ಲಾಡಳಿತದ ಹೊಣೆಗೇಡಿತನ ಭ್ರಷ್ಠಾಚಾರದಿಂದ ತುಂಗಭದ್ರೆಯ ಒಡಲು ನಾಶವಾಗಿ ಪರಿಸರ ಸಂಪತ್ತು ನಾಶವಾಗುತ್ತಿದೆ. ಈ ಕೂಡಲೇ ಈ ಅಕ್ರಮ ನಿಲ್ಲಿಸಿದಿದ್ದರೆ ನಾವೆಲ್ಲ ಪರಿಸರವಾದಿಗಳೆಲ್ಲ ಸೇರಿ ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದೆಂದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮನವಿ ಸಲ್ಲಿಸಿರುವ ಅವರು ಚುನಾವಣಾ ನೆಪದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಈ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಿರುವ ಅವರು ಜಿಲ್ಲಾಡಳಿತದ ಕ್ರಮವನ್ನು ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿರುವ ಬಗ್ಗೆ ಮಾಹಿತಿ ವಿವರಿಸಿದರು.
ಪರಿಸರ ಪ್ರೇಮಿಗಳು, ಹೋರಾಟಗಾರರು ಈ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಎಷ್ಟೆ ದೂರನ್ನು ನೀಡಿದರೂ ಆನೆ ನಡೆದಿದ್ದೆ ದಾರಿ ಎಂಬಂತೆ ಸಾಗುತ್ತಿರುವ ಜಿಲ್ಲಾಡಳಿತದ ಕ್ರಮ ಖಂಡನೀಯವೆಂದು ಪಾಟೀಲರು ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಹೋರಾಟಗಾರರು, ಪರಿಸರ ಪ್ರೇಮಿಗಳು, ಪ್ರಗತಿಪರ ಚಿಂತಕರು ತೀಮರ್ಾನಿಸಿದಂತೆ ಮತದಾನ ಬಹಿಷ್ಕರಿಸಿ ಮತದಾನದ ಪ್ರಮಾಣ ಕಡಿಮೆಯಾದರೆ ಅದಕ್ಕೆ ಹೊಣೆ ಜಿಲ್ಲಾಡಳಿತವೇ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಪರಿಸರವಾದಿಗಳು ಈ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಬೇಲಿಯೆ ಎದ್ದು ಹೊಲ ಮೇಯ್ದರೆ ಉಳಿಗಾಲವೆಲ್ಲಿ? ಅಕ್ರಮಗಳನ್ನು ತಡೆಗಟ್ಟಬೇಕಾದವರೇ ಅಕ್ರಮದಲ್ಲಿ ಭಾಗಿಯಾದರೆ ಗತಿ ಏನು ಎಂದು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾರುತಿ ಎಚ್. ಕುರುಬರ, ತಿರಕಪ್ಪ ಐರಣಿ, ಅಶೋಕಗೌಡ ಗಂಗನಗೌಡ, ಹರಿಹರಗೌಡ ಎಸ್. ಪಾಟೀಲ, ಮಂಜಪ್ಪ ದೊಡಮನಿ, ಪ್ರಶಾಂತರಡ್ಡಿ ಯರೆಕುಪ್ಪಿ. ಹನಮಂತಪ್ಪ ಪವಾರ, ಬಸವರಾಜ ತಳವಾರ, ಶಿವರಾಜ ಎಚ್.ಎಂ. ಮುಂತಾದವರು ಭಾಗವಹಿಸಿದ್ದರು