ಚಿಕ್ಕೋಡಿ

ಪ್ರವರ್ಗ ಒಂದರ ಜಾತಿಗಳು ಒಗ್ಗೂಡಿದಾಗ ಮಾತ್ರ ರಾಜಕೀಯ ಸ್ಥಾನಮಾನ: ಡಿ.ಟಿ.ಶ್ರೀನಿವಾಸ

ಪ್ರವರ್ಗ ಒಂದರ ಜಾತಿಗಳು ಒಗ್ಗೂಡಿದಾಗ ಮಾತ್ರ ರಾಜಕೀಯ ಸ್ಥಾನಮಾನ: ಡಿ.ಟಿ.ಶ್ರೀನಿವಾಸ

ಚಿಕ್ಕೋಡಿ 23: ಪ್ರವರ್ಗ ಒಂದರ ಜಾತಿಯ ಜನರ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೇಂದ್ರದಲ್ಲಿ ಪ್ರಸ್ತಾವಿಸಲು ಪ್ರವರ್ಗ ಒಂದರ ಕನಿಷ್ಠ ಓರ್ವ ಸದಸ್ಯ ಆಯ್ಕೆಯಾಗಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ ಒಂದರ ಜಾತಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಡಿ.ಟಿ.ಶ್ರೀನಿವಾಸ ಹೇಳಿದರು. 

ಚಿಕ್ಕೋಡಿ ನಗರದಲ್ಲಿ ಆಯೋಜಿಸಿ ಪ್ರವರ್ಗ ಒಂದರ ಚಿಂತನ ಮಂತನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಮುಂಬರುವ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಜನರು ಆಯ್ಕೆಯಾಗಬೇಕು. 2023 ವಿಧಾನಸಭೆ ಚುನಾವಣೆಯಲ್ಲಿ 10 ಕ್ಕೆ ಹೆಚ್ಚು ಶಾಸಕರು ಆಯ್ಕೆಯಾಗಬೇಕು. ಇಬ್ಬರಿಗೆ ಕ್ಯಾಬಿನೆಟ್ ಸಷಿವ ಸ್ಥಾನ ಸಿಗಬೇಕು. ಅಂದಾಗ ಮಾತ್ರ ಪ್ರವರ್ಗ ಒಂದರ 90 ಜಾತಿಯ ಜನರಿಗೆ ನ್ಯಾಯಸಿಗುವುದು ಖಚಿತ ಎಂದರು. 

ಪ್ರವರ್ಗ ಒಂದರ ಜಾತಿಗಳಿಗೆ ಸರಕಾರದಿಂದ ಹೆಚ್ಚಿನ ಸೌಲಭ್ಯ ಸಿಗಬೇಕಾದರೇ ಪ್ರವರ್ಗ ಒಂದರ ಎಲ್ಲ ಜಾತಿಗಳ ಒಗ್ಗಟಿನ ಬಲಪ್ರದರ್ಶನ ಸಾಧ್ಯ ಎಂದರು. 

ಈಗಾಗಲೇ ವಿವಿಧ ಬೇಡಿಕೆಗಳ ಕುರಿತು ಪಟ್ಟಿ ಮಾಡಿದ್ದು. ಎಲ್ಲ ಬೇಡಿಕೆ ಈಡೇರಿದ್ದರೆ ಮಾತ್ರ ಪ್ರವರ್ಗ ಒಂದರ ಜಾತಿಯ ಜನರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು. 

ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ಬೂದಿಕೊಪ್ಪ ಪ್ರಾಸ್ತಾವಿಕ ಮಾತನಾಡಿ. ಸಂವಿಧಾತ್ಮಕ ಸೌಲಭ್ಯಗಳು ಇತ್ತಿಚ್ಚಿಗೆ ಕಡಿಮೆಯಾಗುತ್ತಿದ್ದು. ಇದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ರಾಜ್ಯಧ್ಯಕ್ಷ ಡಿ.ಟಿ. ಶ್ರೀನಿವಾಸ ಕೈಬಲಪಡಿಸಬೇಕು ಎಂದರು. 

ಚಿಂತನಮಂತನ ಸಭೆಯಲ್ಲಿ ವಿವಿಧ ಜಾತಿಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಚಿತ್ರದುರ್ಗ ಯಾಧವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. 

ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಹಣಬರ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀತಲ ಮುಂಡೆ. ಗಂಗಮಾತಾ ಸಮಾಜದ ಅಧ್ಯಕ್ಷ ಎಂ.ಎಲ್‌.ತಳವಾರ. ಹೆಳವರ ಸಮಾಜದ ಅಧ್ಯಕ್ಷ ಅಮೃತ ದಪ್ಪನ್ನವರ. ಗೊಂದಳಿ ಸಮಾಜದ ರೂಪೇಶ ಸುಪುತ್ರೆ. ಬಿ.ಎಲ್‌.ಪಾಟೀಲ. ಶಿವಲಿಂಗ ಪೂಜೇರಿ. ಶಿವಾಜಿ ನಾಯಿಕ. ಎಸ್‌.ಬಿ.ಪೂಜಾರಿ.ಡಿ.ಆರ್‌.ಬಾಡಕರ. ಎಸ್‌.ಎಸ್‌.ಪಾಟೀಲ.ಮಹಾದೇವ ಕರೋಲೆ. ರಾಮಗೌಡ ಪಾಟೀಲ. ರುದ್ರ​‍್ಪ ಸಂಗಪ್ಪಗೋಳ. ಕಿರಣ ಸಿಂಗಾಯಿ.ಮಹಾದೇವ ನಿಪ್ಪಾಣಿ. ಬಸು ಮಾಳಗೆ. ಮಧುಕರ ನಾಯಿಕ. ರಾಜೇಂದ್ರ ನಾಯಿಕ. ಮಾರುತಿ ಧುಮಾಳ, ಶಿಕ್ಷಕ ಧುಮಾಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ