ಶಿಗ್ಗಾವ್

ಶಾಸಕ ವಿನಯ ಕುಲಕರ್ಣಿ ಮೇಲೆ ರಾಜಕೀಯ ಷಡ್ಯಂತ್ರ : ಆಂಜನೇಯ ಗುಡಗೇರಿ

ಶಾಸಕ ವಿನಯ ಕುಲಕರ್ಣಿ  ಮೇಲೆ ರಾಜಕೀಯ ಷಡ್ಯಂತ್ರ : ಆಂಜನೇಯ ಗುಡಗೇರಿ

ಶಿಗ್ಗಾವಿ 15 ಃ ವಿಧಾನಸಭಾ ಉಪ ಚುನಾವಣೆ ಬಂದಿರುವದರಿಂದ ಶಾಸಕ ವಿನಯ ಕುಲಕರ್ಣಿ ಅವರನ್ನು ತೆಜೊವದೆ ಮಾಡಲಾಗಿದೆ, ರಾಜಕೀಯವಾಗಿ ಈ ಕ್ಷೇತ್ರಕ್ಕೆ ಬರಬಾರದು ಎಂದು ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ ಎಂದು ಬಂಕಾಪೂರ ಪುರಸಭೆಯ ಉಪಾಧ್ಯಕ್ಷ ಆಂಜನೇಯ ಗುಡಗೇರಿ ತಿಳಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಮೂದಾಯಗಳ ಮುಖಂಡರಿಂದ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ವಿನಯ ಕುಲಕರ್ಣಿ ಅವರ ಮೇಲಿನ ಈ ಆರೋಪ ಸತ್ಯಕ್ಕೆ ದೂರವಾಗಿದೆ, ಇದರಲ್ಲಿ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ, ಆರೋಪ ಮಾಡಿರುವ ಮಹಿಳೆ ಈ ಹಿಂದೆ ಹಲವಾರು ವಸೂಲಿ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ, ಅವರ ಬಗ್ಗೆ ಕ್ಷೇತ್ರದ ಜನತೆಗೆ ಸಂಪೂರ್ಣವಾಗಿ ಮಾಹಿತಿ ಇದೆ, ಶಾಸಕ ವಿನಯ ಕುಲಕರ್ಣಿ ಅವರು ಪಕ್ಷಾತೀತ ನಾಯಕ, ಅವರು ಮಹಿಳೆಯನ್ನು ಗೌರವಿಸುವ ಉತ್ತಮ ರಾಜಕಾರಣಿ ಅವರು ಕುಟುಂಬದವರು ಹಾಗೂ ಅವರು ಶಿಗ್ಗಾವಿ ಕ್ಷೇತ್ರಕ್ಕೆ ಬರಬಾರದು ಎಂದು ಕಾಣದ ಕೈಗಳು ಮಾಡಿರುವ ಷಡ್ಯಂತ್ರ, ಶಾಸಕ ವಿನಯ ಕುಲಕರ್ಣಿಯವರಿಗೆ ನಾವು ನೈತಿಕವಾಗಿ ಬಲ ತುಂಬುತ್ತೆವೆ, ಅವರು ಎದೆಗುಂದದೆ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೊಗಬೇಕು ಮತ್ತು ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವದು ಸ್ವಾಗತಾರ್ಯವಾಗಿದೆ ಘಟನೆ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು. 

ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಮಾತನಾಡಿ ಶಾಸಕ ವಿನಯ ಕುಲಕರ್ಣಿಯವನ್ನು ರಾಜಕೀಯವಾಗಿ ತೆಜೊವದೆ ಮಾಡಲಾಗಿದೆ, ಅವರು ಒಳ್ಳೆಯ ನಾಯಕನ ಅವರ ಹೆಸರನ್ನು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ, ಈ ಪ್ರಕರಣದಲ್ಲಿ ಸರ್ಕಾರ ತಪ್ಪು ಮಾಡಿದವರನ್ನು ಶಿಕ್ಷಿಸಿಸಲಿ, ಶಾಸಕ ವಿನಯ ಕುಲಕರ್ಣಿಯವರ ಜೊತೆ ಬೆಂಬಲವಾಗಿರುತ್ತೆವೆ, ಅವರು ರಾಜಕೀಯ ಚಟುವಟಿಕೆಗಳನ್ನು ಮುಂದುವರೆಸಿಬೇಕು, ಅವರು ಪ್ರಗತಿಪರ ರೈತರು, ಜನಪರ ಕಾರ್ಯಗಳನ್ನು ಮಾಡಿದವರು, ಅವರ ವಿರುದ್ದ ಮಂಜುಳಾ ಪೂಜಾರ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಬ್ಲಾಕ್ ಮೇಲೆ ಮಾಡಿಕೊಂಡು ತಿರುಗಾಡುತ್ತಿರುವ ಈ ಮಹಿಳೆ ಮಾತಿಗೆ ಯಾರು ಬೆಲೆ ಕೊಡಬೇಡಿ ಎಂದರು. 

ಪಂಚಮಸಾಲಿ ಸಮೂದಾಯದ ಮುಖಂಡ ಶಿವಾನಂದ ಬಾಗೂರ ಮಾತನಾಡಿ ಸ್ವಯಂ ಘೋಷಿತ ರೈತ ಮಹಿಳೆ ಎಂದು ಹೇಳಿಕೊಳ್ಳುತ್ತ ರಾಜಕೀಯ ಮುಖಂಡರನ್ನು ಬ್ಲಾಕ್ ಮೇಲ್ ಮಾಡುತ್ತಾ ಜೊತೆಗೆ ಜಿಲ್ಲೆಯಾದ್ಯಂತ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಾ ಹೊರಟಿರುವ ಮಂಜುಳಾ ಪೂಜಾರ ವಿರುದ್ದ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು, ನಮ್ಮ ಸಮಾಜದ ಪ್ರಮೂಖ ನಾಯಕರಾದ ಶಾಸಕ ವಿನಯ ಕುಲಕರ್ಣಿ ಅವರನ್ನು ತೆಜೊವದೆ ಮಾಡುತ್ತಿರುವದು ನೋವಿನ ಸಂಗತಿಯಾಗಿದೆ, ಅವರ ಮೇಲೆ ಕಾನುನೂ ಹೋರಾಟಕ್ಕೆ ಮುಂದಾಗಲಿದ್ದೆವೆ ಎಂದರು. 

ಈ ಸಂದರ್ಭದಲ್ಲಿ  ಪಂಚಮಸಾಲಿ ಸಮೂದಾಯದ ಮುಖಂಡ ವಿರೇಶ ಆಜೂರ  

ಬಸವರಾಜ ಗೊಬ್ಬಿ, ಹುಲಗೂರ ಗ್ರಾಪಂ ಅಧ್ಯಕ್ಷ ಜಾವೇದ ಸವಣೂರ, ರುದ್ರ​‍್ಪ ಕೆಳಗಿನಮನಿ ಸೇರಿದಂತೆ ಶಾಸಕ ವಿನಯ ಕುಲಕರ್ಣಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. 

ಸುದ್ದಿ ಓದಿ