ರಾಷ್ಟ್ರೀಯ

ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳು ರೂಪಿಸುತ್ತಿಲ್ಲ- ಪ್ರಧಾನಿ ಮೋದಿ

ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳು ರೂಪಿಸುತ್ತಿಲ್ಲ- ಪ್ರಧಾನಿ ಮೋದಿ

ನವದೆಹಲಿ, ಅಕ್ಟೋಬರ್ 3: ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗಿಲ್ಲ ಎಂದಿರುವ  ಪ್ರಧಾನಿ ನರೇಂದ್ರಮೋದಿ, ಎಲ್ಲರನ್ನೂ ಜೊತೆ ಮುನ್ನಡೆಸಿಕೊಂಡು ಹೋಗುವ ಉದ್ದೇಶವನ್ನು ನೀತಿಗಳು ಹೊಂದಿವೆ ಎಂದು ಹೇಳಿದ್ದಾರೆ. 

ದೇಶ, ಈಗ ಹೊಸ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ದಲಿತರು, ಬುಡಕಟ್ಟು ಜನಾಂಗದವರು, ಸಂತ್ರಸ್ತರು ಮತ್ತು ವಂಚಿತರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ.

ರೋಹ್ತಂಗ್‍ ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಅಟಲ್ ಸುರಂಗ ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ನೋಡಿಕೊಳ್ಳುವ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. 

ಸುರಂಗ ನಿರ್ಮಾಣದಿಂದ ಈ ಪ್ರದೇಶದ ಜನರ ಜೀವನ ಪರಿವರ್ತನೆಯಾಗುತ್ತಿದೆ. ಈ ಇಡೀ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶವಿದೆ. ಪ್ರಕೃತಿಯ ಅಪಾರ ಅನುಗ್ರಹವೂ ಇದೆ. ಆಧ್ಯಾತ್ಮಿಕತೆಯೊಂದಿಗೆ ನಂಬಿಕೆಗೆ ಸಂಬಂಧಿಸಿದ ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳಿವೆ ಎಂದು ಪ್ರಧಾನಿ ಹೇಳಿದ್ದಾರೆ. 

ಸುರಂಗ, ಲೇಹ್-ಲಡಾಖ್‌ನ ಜೀವನಾಡಿಯಾಗಲಿದೆ.  ಭಾರೀ ಹಿಮಪಾತದ ಮಧ್ಯೆ ಪ್ರತಿವರ್ಷ ಆರು ತಿಂಗಳ ಕಾಲ ಕಣಿವೆ ಸಂಪರ್ಕ ಕಡಿದೊಳ್ಳುವುದನ್ನು ಇದು ತಪ್ಪಿಸುತ್ತದೆ. ವರ್ಷವಿಡೀ  ಸುರಂಗ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.   


ಸುದ್ದಿ ಓದಿ