ಗಮನಸೆಳೆದ ಬಚಪನ್ ಎ ಪ್ಲೇ ಸ್ಕೂಲ್ ವಸ್ತು ಪ್ರದರ್ಶನ
ಬಳ್ಳಾರಿ 03: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬ ಘೋಷವಾಕ್ಯದೊಂದಿಗೆ ವಿದ್ಯಾಥರ್ಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಬಚಪನ್ ಎ ಪ್ಲೇ ಸ್ಕೂಲ್ ವತಿಯಿಂದ ನಗರದ ಪೊಲೀಸ್ ಜಿಮ್ಖಾನಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಗಮನಸೆಳೆಯಿತು. ಹಸಿರು ನಗರ, ಹಸಿರು ಶಾಲೆ, ಹಸಿರು ಮೃಗಾಲಯ, ಹಸಿರು ಉದ್ಯಾನವನ ಎಂಬ ವಿಭಾಗಗಳಲ್ಲಿ 150ಕ್ಕೂ ಹೆಚ್ಚು ರೀತಿಯ ನಮೂನೆಗಳನ್ನು ವಸ್ತುಪ್ರದರ್ಶನಕ್ಕಿಡಲಾಗಿತ್ತು. ಶಾಲೆಯ ಮಕ್ಕಳ ಪೋಷಕರು,ಸಾರ್ವಜನಿಕರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರದರ್ಶನದ ಜೊತೆಗೆ ಬಚಪನ್ ಎ ಪ್ಲೇ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಫೋಟೋಶೂಟ್ ಅಡಿಶನ್ಸ್ನಲ್ಲಿ ಸ್ಕೂಲ್ ಮಕ್ಕಳು ಸಂತೋಷದಿಂದ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಚಪನ್ ಎ ಪ್ಲೇ ಸ್ಕೂಲ್ ಬಳ್ಳಾರಿಯ ಮುಖ್ಯಸ್ಥೆ ಪ್ರಿಯಾ ಪಿಳ್ಳೆ ಅವರು ಪರಿಸರದ ಧ್ಯೋಯೊದ್ದೇಶಗಳನ್ನು ಸಾರುವ ಮತ್ತು ನಮ್ಮ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಹಾಗೂ ಸೃಜನಶೀಲತೆಯನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭರಪೂರ್ ಯಶಸ್ಸು ದೊರಕಿರುವುದು ಅತ್ಯಂತ ಸಂತಸ ತಂದಿದೆ ಎಂದರು.ಕೇವಲ ಒಂದು ಪ್ರದರ್ಶನವಾಗದೆ ಪ್ರತಿಯೊಬ್ಬರಲ್ಲೂ ಪರಿಸರ ಪ್ರೇಮದ ಜ್ಞಾನವನ್ನು ವೃದ್ಧಿಮಾಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷೆ ಚಂಚಲಾ, ಕನರ್ಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜುನಾಥ, ಆರ್ಯವೈಶ್ಯ ಮಹಿಳಾ ಮಂಡಳಿಯ ರಾಜ್ಯ ಉಪಾಧ್ಯಕ್ಷೆ ನಿರ್ಮಲಾ ಗುಡತೂರ್, ವೃಕ್ಷಮಿತ್ರ ಗ್ರೂಪ್ ಮುಖ್ಯಸ್ಥ ಅನಿಶ್, ಬಚಪನ್ ಶಾಲೆಯ ಯಾಮಿನಿ ಪಿಳ್ಳೆ ಹಾಗೂ ಶಾಲೆಯ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಇದ್ದರು.