ಕವಿಗಳಿಗೆ- ಕಲಾವಿದರಿಗೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸಬೇಕು; ಅಮರೇಗೌಡ ಪಾಟೀಲ್ ಬಯ್ಯಾಪುರ
ಕುಷ್ಟಗಿ.ಅ 10: ಕವಿಗಳಿಗೆ ಹಾಗೂ ಕಲಾವಿದರಿಗೆ ಸಹಾಯ, ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಿರುಳ್ಗನ್ನಡ ಪ್ರಕಾಶನ ಇವರುಗಳು ಸಂಯುಕ್ತಾಶ್ರಯದಲ್ಲಿ ರವಿವಾರ ಸಂಜೆ ಪಟ್ಟಣದ ಬಸವ ಭವನದಲ್ಲಿ ಏರಿ್ಡಸಿದ್ದ ರವೀಂದ್ರ ಬಾಕಳೆ ಅವರ ಕೂಡಿಟ್ಟ ಕನಸು ಕಥಾ ಸಂಕಲನವನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಅವರು ಬಾಕಳೆಯವರು ಭರವಸೆ ಮೂಡಿಸುವ ಕಥೆಗಾರರಾಗಲಿ ಎಂದು ಶುಭಕೋರಿದರು.
ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು ಸಾಹಿತ್ಯ ಸಮಾಜದ ವ್ಯಾಧಿಗಳಿಗೆ ಮುಲಾಮು ಆಗಲಿ ಎಂದು ಆಶಿಸಿ ಕೂಡಿಟ್ಟ ಕನಸು ಕಥಾಸಂಕಲನ ಸಮಾಜ ಮುಖಿಯಾಗಿದೆ ಸಾಹಿತ್ಯ ರಚನೆ ಕಷ್ಟಕರ ಅದನ್ನು ಸಮಾಜದ ಒಳಿತಿಗಾಗಿ ರಚನೆ ಮಾಡಿದಾಗ ಸಾರ್ಥಕ ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಡಾ. ಜೀವನಸಾಬ ಬಿನ್ನಾಳ ಅವರು ಸಂಭ್ರಮದಲ್ಲಿ ಸಾಹಿತ್ಯ ಮನುಷ್ಯ ಬದುಕಿನ ಪ್ರತಿಬಿಂಬ ,ಗತಿಬಿಂಬ. ಸಾಹಿತ್ಯ ಇಂದಿನ ಸಮಕಾಲಿನ ಸಂಕಷ್ಟಗಳಿಗೆ ಸವಾಲುಗಳಿಗೆ ಪರಿಹಾರವಾಗಬೇಕಾಗಿದೆ, ಸಾಹಿತ್ಯ ಧ್ವನಿ ಇಲ್ಲದವರ ದ್ವನಿಯಾಗಬೇಕು, ಶೋಷಿತರ ಬಡವರ ನಿರ್ಗತಿಕರ ಸಮಾಜದ ಮುಖ್ಯ ವಾಹಿನಿಯಿಂದ ದೂರ ಇರುವ
ಅನೇಕರಿಗೆ ಅದು ಚೈತನ್ಯವನ್ನು ತುಂಬಬೇಕಾಗಿದೆ, ಸಾಹಿತ್ಯ ಮನುಷ್ಯನಿಗೆ ಉತ್ತಮ ನಾಗರಿಕರಾಗಿ ಬದುಕಿ ಬಾಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಕಾವ್ಯ ಮನುಷ್ಯನ ಮನಸ್ಸನ್ನು ಅರಳಿಸುವಂತಿರಬೇಕು ಬದಲಾಗಿ ಕೆರಳಿಸುವಂತಿರಬಾರದು, ಸಮಾಜದ ಶಾಂತಿ ಸಾಮರಸ್ಯ ಭಾವೈಕ್ಯತೆಯ ಪ್ರತಿಬಿಂಬದಂತೆ ಸಾಹಿತ್ಯ ರಚಿತವಾಗಬೇಕು , ಪುಸ್ತಕಗಳನ್ನ ಕೊಂಡುಓದುವ ಸಂಸ್ಕೃತಿ ಬೆಳೆಯಬೇಕು ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ ಕವಿ ಕಲಾವಿದ ಸಾಹಿತಿ ಈ ಸಮಾಜದ ಬಹುದೊಡ್ಡ ಆಸ್ತಿ ಎಂಬ ಆಶಯ ನುಡಿಗಳನ್ನು ಆಡಿದರು.
ಪುಸ್ತಕ ಆಯ್ಕೆ ಸಮಿತಿಯ ಸದಸ್ಯ ಕಿಶನರಾವ ಕುಲಕರ್ಣಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಸಪ್ಪ ವಾಲಿಕಾರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಟರಾಜ ಸೋನಾರ, ಜಂಬುನಾಥ ಇವರನ್ನು ಸನ್ಮಾನಿಸಿ, ಗೌರವಿಸಿದರು.
ಸಾಹಿತಿ ಶೇಖರಗೌಡ ಸರನಾಡಗೌಡರು ಕೂಡಿಟ್ಟ ಕನಸು ಕಥಾ ಸಂಕಲವನ್ನು ಪರಿಚಯಿಸಿ ಮಾತನಾಡುತ್ತಾ ಬಾಕಳೆ ಯವರ 54 ಕಥೆಗಳ ಒಟ್ಟು ಸಂಗ್ರಹ ಇದು ಕೂಡಿಟ್ಟ ಕನಸು ಕಥಾಸಂಕಲನದಲ್ಲಿ ಬರುವ ಕಥೆಗಳು ಸಮಾಜದ ಅಂಕು ಡೊಂಕು ತಿದ್ದುವ ರೀತಿಯಲ್ಲಿ ಮೂಡಿವೇ ಪ್ರತಿಯೊಂದು ಕಥೆಯ ಕೊನೆಯಲ್ಲಿ ಉತ್ತಮ ಸಂದೇಶ ಇದೆ ಇನ್ನೂ ಹೆಚ್ಚು ಕೃತಿಗಳು ಇವರಿಂದ ಹೊರಬರಲಿ ಎಂದು ನುಡಿದರು.
ಗವಿಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಕೂಡಿಟ್ಟ ಕನಸು ಕಥೆಯ ರೂಪಕವನ್ನು ಅಭಿವ್ಯಕ್ತಿಸಿದರು. ಲೇಖಕ ರವಿಂದ್ರ ಬಾಕಳೆ ಮಾತನಾಡಿ ಇದು ನನ್ನ ಪ್ರಥಮ ಕಥಾಸಂಕಲನ ಆಗಿದ್ದು ಈ ದಿನ ಲೋಕಾರೆ್ಣ ಆಗುವ ಮೂಲಕ ತಮ್ಮ ಕೈಗೆ ತಲುಪಿಸಲು ಸಂತಸ ತಂದಿದೆ ಓದುಗರು ಕಥೆಗಳನ್ನು ನೋಡಿ ಸಲಹೆ ಸೂಚನೆಗಳನ್ನು ನೀಡಬಹುದು ತಮ್ಮ ಪ್ರೋತ್ಸಾಹ ನನಗೆ ಶ್ರೀ
ರಕ್ಷೆ ಈ ಸಂಕಲನ ಹೊರ ಬರಲು ಆರ್ಥಿಕ ನೆರವು ನೀಡಿದ ಬಯ್ಯಾಪೂರ ಅವರ ಸಾಹಿತ್ಯದ ಅಭಿರುಚಿಗೆ ಕೃತಘ್ನತೆಯನ್ನು ಅರ್ಿಸಿದದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ರವಿಕುಮಾರ್ ದಾನಿ , ಶ್ರೀನಿವಾಸ್ ಜಾಗೀರದಾರ, ಶಾರದಾ ಶೆಟ್ಟರ್, ನಬಿಸಾಬ್ ಕುಷ್ಟಗಿ, ರವೀಂದ್ರ ಬಾಕಳೆ, ವಂದನಾ ಗೋಗಿ, ಮುಂತಾದವರು ಪಾಲ್ಗೊಂಡಿದ್ದರು.
ನಂತರ ನಡೆದ ಕವಿ ಗೋಷ್ಠಿ ಯಲ್ಲಿ ಸುಮಾರು 30 ಕ್ಕೂ ಅದಿಕ ಕವಿಗಳು ಕವನ ವಾಚಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶರಣಪ್ಪ ವಡಿಗೇರಿ ಮಾತನಾಡಿ ಪ್ರಸ್ತುತ ಸಂಧರ್ಬದ ಕವನಗಳು ಮತ್ತು ಸಂದೇಶ ಪೂರಿತ ಕವನಗಳನ್ನು ರಚಿಸುವ ಅಗತ್ಯವಿದೆ ಎಂದು ಹೇಳಿದರು. ಡಾ. ಕೆ .ಶರಣಪ್ಪ ನೀಡಿಶೇಸಿ, ಮಾತನಾಡಿ ಕೂಡಿಟ್ಟ ಕನಸು ಪುಸ್ತಕ ಬಿಡುಗಡೆಗೆ ಶುಭ ಕೋರಿದರು. ವೇದಿಕೆಯ ಮೇಲೆ ಹ ಯ ಈಟಿ, ತಾಜುದ್ದೀನ್ ದಳಪತಿ, ಚಂದಪ್ಪ ಹಕ್ಕಿ , ಅಮರೇಗೌಡ ಜಾಲಿಹಾಳ್ ಮುಂತಾದವರು ಪಾಲ್ಗೊಂಡಿದ್ದರು.ಮಮ ಎಸ್.ಎಸ್.ಕೆ.ಸಮಾಜ ಪ್ರಮುಖರಾದ ಡಾ.ರವಿಕುಮಾರ್ ದಾನಿ, ಪರಶುರಾಮ ನಿರಂಜನ ಅವರು ರವಿಂದ್ರ ಬಾಕಳೆ ಅವರನ್ನು ಸನ್ಮಾನಿಸಿದರು.
ಕ.ಸಾ.ಪ ಕಾರ್ಯದರ್ಶಿ ಮಹೇಶ ಹಡಪದ ನಿರೂಪಿಸಿದರು. ಪತ್ರಕರ್ತ ಶರಣಪ್ಪ ಲೈನದ ಸ್ವಾಗತಿಸಿದರು.