ಅನಧಿಕೃತ ಬಡಾವಣೆಯನ್ನು ತೆರವುಗೊಳಿಸಲು ಒತ್ತಾಯಿಸಿ ಮನವಿ
ಬಳ್ಳಾರಿ:ಜೂ 26: ನಗರದ ತಿರುಮಲ ಫಾಮ್ಸ್ ಲ್ಯಾಂಡ್ ಮಾಲೀಕರಾದ ಸಿ.ಭಾಸ್ಕರ ರಾವ್ (ಅರ್ಜುನ್ ಕನ್ಸಲ್ಟೆನ್ಸಿ) ರವರ ಅನಧಿಕೃತ ಬಡಾವಣೆಯನ್ನು ತೆರವುಗೊಳಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ವೇದಿಕೆಯ ಸಂಘಟನೆಯು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ.ಬಿ ರವರು ಮಾತನಾಡಿ, ತಿರುಮಲ ಫಾಮ್ಸ್ ಲ್ಯಾಂಡ್" (ಸರ್ವೆ ನಂ.73/ಬಿ/1. ಸಿ/1. ಡಿ/1. ಇ/1 ಇತ್ಯಾದಿ ಆಲದಹಳ್ಳಿ ಗ್ರಾಮದ ಬೈಪಾಸ್ ರಸ್ತೆ ಹತ್ತಿರ) ಈ ಬಡಾವಣೆಯಲ್ಲಿ ನಾವು ವೀಕ್ಷಿಸಿರುವ ಪ್ರಕಾರ ನಾಗರೀಕ ಮೂಲಭೂತ ಸೌಕರ್ಯಗಳಾದ ಶುದ್ಧವಾದ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಉತ್ತಮ ರಸ್ತೆ, ಒಳಚರಂಡಿ, ಹೊರ ಚರಂಡಿ ವ್ಯವಸ್ಥೆಯಾಗಲಿ, ಉದ್ಯಾನವನವಾಗಲಿ ಇವುಗಳನ್ನು ಈ ಬಡಾವಣೆಯ ಮಾಲೀಕರಾದ ಸಿ.ಭಾಸ್ಕರ್ ರಾವ್ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆದಕಾರಣ ಈ ಬಡಾವಣೆಯನ್ನು ತೆರವುಗೊಳಿಸಬೇಕು, ಅದೇ ರೀತಿಯಾಗಿ ಈ ಬಡಾವಣೆ, ಎನ್.ಎ ಹೊಂದಿರುವುದಿಲ್ಲ, ಪಂಚಾಯಿತಿ ವ್ಯಾಪ್ತಿಯೊಳಗೆ ಸೇರಿಸಿರುವುದಿಲ್ಲ. ಬಳ್ಳಾರಿ ನಗರ ಅಭಿವೃದ್ಧಿ ಪಾಧಿಕಾರದ ಅನುಮೋದನೆ ಸಹ ಪಡೆದಿರುವುದಿಲ್ಲ. ಆದರೂ ಸಹ “ತಿರುಮಲ ಫಾಮ್ಸ್ ಲ್ಯಾಂಡ್ಸ್” ಮಾಲೀಕರಾದ ಸಿ.ಭಾಸ್ಕರ್ ರಾವ್ ರವರು ಆರ್.ಎಸ್. 30 ಥ 40 ಸುತ್ತಳತೆಯ ಪ್ಲಾಟುಗಳು, ಬೃಹತ್ ಗಾತ್ರದ ಪ್ಲಾಟುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಳ್ಳಾರಿಯ ಉಪ ನೋಂದಾಣಿ ಕಛೇರಿಯಲ್ಲಿಯೂ ಸಹ ಈ ಆರ್.ಎಸ್. ಪ್ಲಾಟುಗಳು ನೋಂದಾಣಿಯಾಗುತ್ತಿಲ್ಲ. ಆದರೆ ಇದು ಜನರಿಗೆ ದಾರಿ ತಪ್ಪಿಸುವ ಹುನ್ನಾರ ನಡೆಸಲಾಗುತ್ತದೆ. ಈ ವ್ಯವಸ್ಥೆ ಕಾನೂನು ಬಾಹಿರ ಕೂಡ ಆಗಿರುತ್ತದೆ. ಆದಕಾರಣ ತಿರುಮಲ ಫಾಮ್ಸ್ ಲ್ಯಾಂಡ್ಸ್ ಬಡಾವಣೆಯನ್ನು ತೆರವುಗೊಳಿಸಿ, ಮತ್ತು ಈ ಬಡಾವಣೆಯ ಮಾಲೀಕರಾದ ಸಿ.ಭಾಸ್ಕರ್ ರಾವ್ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ. ಹೇಮಂತ್ ರಾಜ್, ವಂಶಿಕೃಷ್ಣ, ಉಮೇಶ್, ಪ್ರಶಾಂತ್, ಬಾಬು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.