ರಾಣೆಬೆನ್ನೂರ

ರಾಣೇಬೆನ್ನೂರು ವರ್ತಕರ ಸಂಘಕ್ಕೆ ಅಮೃತ ಮಹೋತ್ಸವದ ಸಂಭ್ರಮ

ರಾಣೇಬೆನ್ನೂರು ವರ್ತಕರ ಸಂಘಕ್ಕೆ ಅಮೃತ ಮಹೋತ್ಸವದ ಸಂಭ್ರಮ

ಲೋಕದರ್ಶನ ವರದಿ 


ರಾಣೇಬೆನ್ನೂರು 25: ಹಾವೇರಿ ಜಿಲ್ಲೆಯ ವಾಣಿಜ್ಯ ನಗರ ರಾಣೇಬೆನ್ನೂರು ತನ್ನ ವಾಣಿಜ್ಯ ವ್ಯವಹಾರಿಕ ಮತ್ತು ಬಿಜೋತ್ಪಾದನೆಯ ಮೂಲಕ ಏಷ್ಯಾ ಖಂಡದಲ್ಲಿ ತನ್ನನ್ನೇ ತಾನು ಗುರುತಿಸಿಕೂಂಡಿರುವ ವಾಣಿಜ್ಯ ನಗರದ ವರ್ತಕರ ಸಂಘವು ಇದೀಗ ಅಮೃತ ಮಹೋತ್ಸವದ 75ನೇ ವರ್ಷಾಚರಣೆ ಸಂಭ್ರಮವನ್ನು ಆಚರಿಸಿಕೂಳ್ಳುತ್ತಲಿದೆ. ಇದೆ 27 ರಂದು ಶವಿವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಸಮುದಾಯ ಭವನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವು ಜರುಗಲಿದೆ.  

   ಸ್ವಾತಂತ್ರ ಪೂರ್ವದಲ್ಲಿ ಆರಂಭಗೂಂಡ ಸಂಘವು ಇದೀಗ ಬೃಹತ್ ಪ್ರಮಾಣದಲ್ಲಿ ಅಭಿವೃದ್ದಿ ಕಂಡಿದೆ. ಅಂದು ಸಮಗ್ರ ವರ್ತಕ ಸಮುದಾಯದ ಹಿತ ಚಿಂತನೆಗಾಗಿ ಅಂದಿನ ಹಿರಿಯರು ಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳವಣಿಗೆ ಕಂಡಿದೆ.  ಈ ನಗರಕ್ಕೆ ಕಳಸ ಪ್ರಾಯವಾಗಿ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಅತ್ಯಾಧುನಿಕ ಕಟ್ಟಡದೂಂದಿಗೆ ರಾರಾಜಿಸುತ್ತಿರುವುದು ನಗರಕ್ಕೆ ಅತೀವ ಹೆಮ್ಮೆಯ ಸಂಗತಿಯಾಗಿದೆ.  

    ವರ್ತಕರ ಸಂಘವು ಕೇವಲ ತನ್ನ ಹೀತಾಶಕ್ತಯನ್ನೇ ಮೂಲವಾಗಿರಿಸಿಕೂಳ್ಳದೆ ವರ್ತಕರ ವಾಣಿಜ್ಯ ಉತ್ಪನ್ನಗಳನ್ನು ರು​‍್ತ ಮಾಡುವ ಉದ್ದೇಶದಿಂದ ಸುಂದರ ರೈಲ್ವೆ ನಿಲ್ದಾಣದ ಜೊತೆಗೆ  ವಾಗಿನ್ ಟ್ರಾಕ್‌ನ ಸೌಲಭ್ಯ ಸಹ  ದೂರಕಿಸಿಕೂಂಡಿದೆ. ಅಲ್ಲದೇ ಇಲ್ಲಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುವ ವರ್ತಕರು ಮತ್ತು ಪ್ರಯಾಣಿಕರಿಗೆ ವಿವಿಧ ರೈಲುಗಳ ನಿಲುಗಡೆ ಮಾಡುವಲ್ಲಿ ಯಶಸ್ವಿ ಕಂಡಿದೆ ಮತ್ತು ಸಾಮಾಜಿಕ ಸೇವೆಯಲ್ಲಿ ಸದಾ ಕಾಲ ಎಲ್ಲ ರೀತಿಯ ಆರ್ಥಿಕ ಸಹಾಯ ಹಸ್ತ ನೀಡುತ್ತಾ ತನ್ನ ಮಾನವೀಯ ಸೌಜನ್ಯವನ್ನು ನೀಡುತ್ತಾ  ಸರ್ಕಾರ ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.  

     ವಾಣಿಜ್ಯ ಉದ್ಯಮಿಗಳ ಅಭಿವೃದ್ದಿಗೆ ಅಂದು ದೂರವಾಣಿ, ಟೇಲಿಗ್ರಾಮ್, ಸೇರಿದಂತೆ ಮತ್ತಿತರೆ ವ್ಯವಸ್ಥೆನ ಪಡೆದುಕೂಂಡು ಸಾಧನೆ ಮೇರೆದಿದ್ದ ಸಂಘ  ಇಂದಿನ ಎಲ್ಲ ಹಂತದ ಆಧುನಿಕ ಸಂಪರ್ಕ ಸಾಧನಗಳನ್ನು ಬಳಸಿಕೂಳ್ಳುತ್ತಲಿದೆ. ಇಂದು ವಿಶಾಲವಾದ ಕಟ್ಟಡ ಹೂಂದಿದೆ. ಅಂದಿನ  ಆರಂಭದ ಅಧ್ಯಕ್ಷ ಚನ್ನಬಸಪ್ಪ ಎಸ್‌. ಜಂಬಗಿ, ಉಪಾಧ್ಯಕ್ಷ ಪರಶಪ್ಪ ಬಿ. ಬ್ಯಾಡಗಿ, ಚೆರ್ಮನ್ ಐ.ಸಿ. ಉಪ್ಪಿನ, ಮತ್ತು ಸದಸ್ಯರ ಸಹಕಾರದಿಂದ 1958 ರಲ್ಲಿ ನೂತನ ಕಟ್ಟಡದ ಉದ್ಘಾಟನೆ ನಡೆದಿದ್ದು ಅವರ ದೂರ ದೃಷ್ಟಿಯ ಫಲವಾಗಿ ಇಂದು ವಿಶಾಲ ಕಟ್ಟಡ ಹೂಂದಿದೆ ಎನ್ನುತ್ತಾರೆ. ಇಂದಿನ ಆಡಳಿತ ಮಂಡಳಿಯ ಸರ್ವಸದಸ್ಯರು 1972 ರಲ್ಲಿ ರಜತ ಮಹೋತ್ಸವ ಆಚರಿಸಿಕೂಂಡ ನಂತರ ಇದೀಗ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸಿಕೂಳ್ಳುತ್ತಿರುವುದು ವರ್ತಕ ಸಮುದಾಯದ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. 


ಸುದ್ದಿ ಓದಿ