ಸಸಿ ನೆಟ್ಟು ಬೆಳೆಸುವುದು ನಮ್ಮ ಜವಾಬ್ದಾರಿಯುತ ಕೆಲಸವಾಗಬೇಕು
ಬಳ್ಳಾರಿ.18: ಸಾಮಾಜಿಕ ಕಳಕಳಿ ಹೊಂದಿರುವ 'ನಿಮಗಾಗಿ ನಾವು ಸಂಸ್ಥೆ (ನೋಂ), ಬಳ್ಳಾರಿ' ಈಗಾಗಲೇ ಹಲವಾರು ಜನಪರ ಕಾಳಜಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಗ ಸತತ ಎಂಟನೇ ವರುಷದ ನಮ್ಮ ಪರಿಸರ ಯೋಜನೆ ಮೂಲಕ ಬಳ್ಳಾರಿ ನಗರದಲ್ಲಿ ಸಸಿ ನೆಡುವ ಕೆಲಸವನ್ನು ಭಾನುವಾರ ಬೆಳಿಗ್ಗೆ 07 ರಿಂದ ಬೆಳಿಗ್ಗೆ 11 ರವರೆಗೆ 24 ಕ್ಕೂ ಹೆಚ್ಚು ಸಂಸ್ಥೆಯ ಸದಸ್ಯರು ಪಾಲ್ಗೋಂಡು 35ಕ್ಕೂ ಹೆಚ್ಚು ಸಸಿಗಳನ್ನು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೆರವೇರಿಸಲಾಯಿತು
ಸಂಸ್ಥೆಯ ಕಾರ್ಯದರ್ಶಿಯಾದ ಅಜಿತ್ ರವರು ಮಾತಾಡಿ ನಮ್ಮ ಪರಿಸರ ಯೋಜನೆಯು ಈ ಮಳೆಗಾಲ ಮುಗಿಯುವವರೆಗೆ ಇರಲಿದ್ದು, ಉಚಿತವಾಗಿ ಸಸಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಕಾರ್ಯನಿರ್ವಾಹಕರಾದ ಮೆಹಬೂಬ್ ಭಾಷ ಮಾತಾಡಿ ಸಸಿಗಳನ್ನು ನೆಟ್ಟು ಬೆಳೆಸುವುದು ನಮ್ಮ ಜವಾಬ್ದಾರಿಯುತ ಕೆಲಸವಾಗಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಜೊತೆಯಾಗಿದ್ದ ಕಾಲೇಜಿನ ಹಳೇ ವಿದ್ಯಾರ್ಥಿಯಾದ ಪೊಲೀಸ್ ಸಿಬ್ಬಂದಿಯಾದ ಹರೀಶ್ ರೆಡ್ಡಿ ರವರು ಮಾತಾಡಿ ನಮ್ಮ ಕಾಲೇಜನ್ನು ಹಸಿರಾಗಿ ಮಾಡುವ ಜವಾಬ್ದಾರಿ ಹೊತ್ತ ನಿಮಗಾಗಿ ನಾವು ಸಂಸ್ಥೆಯ ಕೆಲಸ ನಮಗೆ ಮಾದರಿ ಎಂದು ತಿಳಿಸಿದರು. ನಮ್ಮ ಪರಿಸರ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಅನುಪಮ ಶಮೀನ್ ಭಾನು ಸಂಸ್ಥೆಯ ಕು.ಸಾನ್ವಿ, ಕು. ಆಯಾನ್ ವಿನಯ್, ಅಜಿತ್,ಭಾಷ,ಸುದರ್ಶನ್, ಸಾಗರ್, ಸಂದೀಪ್, ವೀರೇಶ್, ಸಂಜೀವ್, ನಾಗರಾಜ್, ಹೇಮಂತ್, ಬಾಲು, ಅನಿಲ್, ಸಾಗರ್ ದಕ್ಷಿಣ ಮೂರ್ತಿ, ಶಿವರಾಜ್, ಅವಿನಾಶ್, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.