ಸೌಂದತ್ತಿ

ವಿದ್ಯುತ್ ದರ ಏರಿಕೆ ಖಂಡಿಸಿ ತಹಸೀಲ್ದಾರಗೆ ಮನವಿ

ವಿದ್ಯುತ್ ದರ ಏರಿಕೆ ಖಂಡಿಸಿ ತಹಸೀಲ್ದಾರಗೆ ಮನವಿ

ಸವದತ್ತಿ 23: ವಿದ್ಯುತ್ತ ದರವನ್ನು ಅನಿಯಮಿತವಾಗಿ ಹೆಚ್ಚಳ ಮಾಡಿರುವದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಕೂಡಲೆ ಮೊದಲಿನ ದರವನ್ನು ಮುಂದುವರೆಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. 

ವಿದ್ಯುತ್ತ ದರ ಏರಿಕೆಯಿಂದ ಸಾರ್ವಜನಿಕರಿಗೆ, ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚಿನ ಹೊರೆಯಾಗಿದ್ದು, ದಿನನಿತ್ಯದ ವ್ಯವಹಾರಗಳಿಗೆ ಬಹಳ ತೊಂದರೆಯಾಗುವದರೊಂದಿಗೆ ಆರ್ಥಿಕ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಜೆ.ಬಿ.ಜಕ್ಕನಗೌಡರವರಿಗೆ ನೀಡಿ ಕೂಡಲೇ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಬಾಳಪ್ಪ ಮಡಿವಾಳರ, ಮಲ್ಲಿಕಾರ್ಜುನ ಬೀಳಗಿ, ಉಮೇಶ ಭೂಮನ್ನವರ, ಬಸವರಾಜ ಬಿಕ್ಕಣ್ಣವರ, ರಾಜಶೇಖರ ನಿಡವಣಿ, ಶಂಕರ ಇಜಂತಕರ, ಸಂಗಮೇಶ ಕಳ್ಳಿಮಠ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ