ಸಾಲದ ಭಾದೆ: ವ್ಯಕ್ತಿ ಆತ್ಮಹತ್ಯೆ
ಜಮಖಂಡಿ 31: ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾಲದ ಭಾದೆ ತಾಳಲಾರದೆ ನೇಣು ಬಿಗ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲಹಳ್ಳಿ ಗ್ರಾಮದ (34) ಗುರುಪಾದ ಶಂಕರ ಉಪ್ಪಲದಿನ್ನಿ ಸೊಸೈಯಿಟಿ ಹಾಗೂ ವಿವಿಧ ಬ್ಯಾಂಕಗಳಲ್ಲಿ ಲಕ್ಷಾಂತರ ರೂ. ಸಾಲದ ಹೊರೆಯಿಂದ ಮನನೊಂದು ನೇಣಿಗೆ ಶರಣಾದ ದುದ್ರೈವಿ.
ಒಂದು ಗಂಡು.ಒಂದು ಹೆಣ್ಣು ಮಗು ಹೆಂಡತಿ ಹಾಗೂ ತಾಯಿಯ ಜೊತೆಯಲ್ಲಿ ಜೀವನ ಸಾಗಿಸುವ ವ್ಯಕ್ತಿಯಾಗಿದ್ದು. ಸ್ವಂತ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬೀಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ಕುರಿತು ಗ್ರಾಮೀಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಮನೆಯ ಕುಟುಂಬಸ್ಥರು ಹಾಗೂ ಮಕ್ಕಳ ಅಕ್ರಂದನ ಮುಗಿಲು ಮುಟುವಂತೆ ಇತ್ತು.