ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
ಬಳ್ಳಾರಿ,ಜೂ.06: ಬಾಪೂಜಿ ನಗರದ ಗುಂತಕಲ್ ಗುಡಸಲಿ ಏರಿಯಾ ಸುಗುರೇಶ್ವರ ರೈಸ್ ಮಿಲ್ ಎದುರಿಗೆ ಬಿಲಾಲ್ ಮಸೀದಿಯ ಹತ್ತಿರದ ನಿವಾಸಿ ಲಾಲ್‌ಸಾಬ್(45) ಎಂಬ ವ್ಯಕ್ತಿಯು ಜೂ.04 ರಂದು ಕಾಣೆಯಾಗಿರುವ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿ ಎತ್ತರ 5.8 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಚೆಕ್ಸ್ ಶರ್ಟ್ ಹಾಗೂ ನೀಲಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಎಡಗೈಯಲ್ಲಿ ಹಳೆಗಾಯಕ್ಕೆ ಕಟ್ಟಿದ್ದ ಪಟ್ಟಿ ಹಾಗೆಯೇ ಇರುತ್ತದೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ದೂ.08392-272022, ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿ.ಐ ಮೊ.9480803045, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.