ಹೊಸಪೇಟೆ

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ) 14:  ಹೊಸಪೇಟೆಯ ಬಿ.ಜೆ.ಎಕ್ಸಟೆನ್ಷನ್ ನಿವಾಸಿಯಾದ ಸುಮಾರು 44 ವರ್ಷದ ಶಫೀ ಉರ್ ರೆಹಮಾನ್ ಎನ್ನುವವರು ಆ.13ರಂದು ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಎ.ಎಸ್‌.ಐ. ಎನ್‌.ಪರಮೇಶ್ವರ​‍್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.8, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಮೆರೂನ್ ಕಲರ್ ತುಂಬು ತೋಳಿನ ಶರ್ಟನ್ನು ಮತ್ತು ಕಡು ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿರುತ್ತಾರೆ, ನೀಲಿ ಸ್ಟಿಕರ್ ಇರುವ ಬಿಳಿ ಬಣ್ಣದ ಹೊಂಡಾ ಡಿಯೋ ಬೈಕ್ ನಂ. ಕೆ.ಎ.-35 ಇಡಿ-3978 ತೆಗೆದುಕೊಂಡು ಹೋಗಿರುತ್ತಾರೆ. 

ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗೆ 100ಕ್ಕೆ, ಹೊಸಪೇಟೆ ಕಂಟ್ರೋಲ್ ರೂಂ.ಸಂ:08394-226100, ಗ್ರಾಮೀಣ ಪೊಲೀಸ್ ಠಾಣೆಯ ದೂ:08394-228233, ಪಿ.ಎಸ್‌. ಗ್ರಾಮೀಣ ಪೊಲೀಸ್ ಠಾಣೆಯ ದೂ:9480803075 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. 


ಸುದ್ದಿ ಓದಿ