ಚಿಕ್ಕೋಡಿ

ಕಣ್ಣಿನ ಸಂರಕ್ಷಿತಗೆ ಕಾಲ ಕಾಲಕ್ಕೆ ತಪಾಸಣೆ ಬಹುಮುಖ್ಯ: ಮುತ್ನಾಳಿ

ಕಣ್ಣಿನ ಸಂರಕ್ಷಿತಗೆ ಕಾಲ ಕಾಲಕ್ಕೆ ತಪಾಸಣೆ ಬಹುಮುಖ್ಯ: ಮುತ್ನಾಳಿ

ಚಿಕ್ಕೋಡಿ 06: ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಎಂದು ಕೆಎಲ್‌ಇ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕಿರಣ ಮುತ್ನಾಳಿ ಹೇಳಿದರು. 

ಚಿಕ್ಕೋಡಿ ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ಘಟಕದಲ್ಲಿ ಏರಿ​‍್ಡಸಿದ ಉಚಿತ ಕಣ್ಣು ಹಾಗೂ ಸಾಮಾನ್ಯ ರೋಗಗಳ ತಪಾಸಣಾ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದರು.  

ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು. 

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ಘಟಕದ ಕಾರ್ಮಿಕ ಅಧಿಕಾರಿ ಬಿರಾದಾರ ಮಾತನಾಡುತ್ತಾ ಕಣ್ಣು ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಪ್ರತಿ ದಿನ ಸ್ವಚ್ಛ ಹಾಗೂ ಶುದ್ದ ನೀರಿನಿಂದ ತೊಳ್ಳೆದುಕೊಳ್ಳಬೇಕೆಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ  ಸಂಗಪ್ಪಾ ಮಾತನಾಡಿ ಕೆ ಎಲ್ ಇ ಸಂಸ್ಥೆಯು ಸಮಾಜ ಮುಖಿಯಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ, ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಹೆಮ್ಮರವಾಗಿ ಬೆಳೆಯಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಸಿಬ್ಬಂದಿಗಳಿಗೆ ಅನೂಕುಲವಾಗುವಂತೆ ಇಂದು ನಮ್ಮ ಘಟಕದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. 

ಶಿಬಿರದಲ್ಲಿ ಆಸ್ಪತ್ರೆಯ ಉಪಅಧಿಕ್ಷಕ ಡಾ.ಬಾಹುಬಲಿ ಮಹಾಜನ, ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ, ಡಾ.ಅಶ್ವಿನಿ ಕುಂಬಾರ, ಡಾ.ಅನುಪಮಾ ಹೊನ್ನಾಯ್ಕ, ಡಾ.ಅರ್ಚನಾ ಚೌಗಲಾ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಮ್ ಬಿ ಬದಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 110ಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ಮತ್ತು ಚಿಕಿತ್ಸೆ ಮಾಡಲಾಯಿತು. 


ಸುದ್ದಿ ಓದಿ