ಚಿಕ್ಕೋಡಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ

ಅಂಕಲಿ ಶಾರದಾ ಕೋರೆ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸತ್ಕಾರ 

ಮಾಂಜರಿ 12: ಸ್ಥಳಿಯ ಕೆಎಲ್‌ಇ ಸಂಸ್ಥೆಯ ಶಾರದಾ ಕೋರೆ ಪ್ರೌಢ ಶಾಲೆಯಲ್ಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ನೆರವೇರಿಸಲಾಯಿತು.  

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರಣ್ಣಾ ಕೋರೆ, ರಾಯಬಾಗ ವಿಧಾನಸಭಾ ಶಾಸಕ ದುರ್ಯೋಧನ ಐಹೊಳೆ, ಸಿ ಬಿ ಕೋರೆ ಸಕ್ಕರೆ ಕಾರ್ಖಾನೆ  ಚಿಕ್ಕೋಡಿಯ ಅಧ್ಯಕ್ಷ ಹಾಗೂ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಕೋರೆಯವರು ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ರಮ್ಯಾ, ಜಯಂತ ನಾಯಿಕ ಶೇ. 97.12, ಗಂಗಾ ಗಣಪತಿ ಬುಬನಾಳೆ ಶೇ. 96.96 ದ್ವಿತಿಯ ಸ್ಥಾನ ಹಾಗೂ ಅಣ್ಣಪ್ಪಾಹಿರೇಕುರಬರ ಶೇ. 96.16 ಗಳಿಸಿ, ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿ ಶುಭ ಹಾರೈಸಿದರು.  

ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಬಿ ಎಸ್ ಅಂಬಿ, ಉಪ ಪ್ರಾಚಾರ್ಯ ಜೆ. ಎಸ್‌. ತಮಗೊಂಡ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್‌. ಸಿ. ಪಾಟೀಲ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಕೆ. ಪಾಟೀಲ ಹಾಗೂ ಪ್ರೌಢ ಶಾಲೆಯ ಎಲ್ಲ ಸಿಬ್ಬಂದಿ ಹಾಜರಿದ್ದರು. 


ಸುದ್ದಿ ಓದಿ