ಜನ ಸಾಮಾನ್ಯರು ನ್ಯಾಯದಿಂದ ವಂಚಿತರಾಗಬಾರದು: ಅಣ್ಣುಗೌಡ ಪಾಟೀಲ
ಲೋಕದರ್ಶನ ವರದಿ
ರಾಣೇಬೆನ್ನೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಬಡತನ ರೇಖೆಗಿಂತ ಕೇಳಗಿರುವ ಬಡ ಜನರಿಗಾಗಿ ಮತ್ತು ಬಡತನ ನಿರ್ಮೂಲನೆಗಾಗಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೂಳಿಸಿ ಜನಸಾಮಾನ್ಯರಿಗೆ ನ್ಯಾಯದಿಂದ ವಂಚಿತರಾದವರಿಗೆ ಸಹಾಯ ಸಹಕಾರದ ಮೂಲಕ ಕಾನೂನು ಅರಿವು ನೆರವನ್ನು ನೀಡುತ್ತಲಿದೆ ಗ್ರಾಮೀಣ ನಾಗರೀಕರು ಇದರ ಪ್ರಯೋಜನ ಪಡೆಯುವುದರ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬದುಕನ್ನು ಕಟ್ಟಿಕೂಳ್ಳಲು ಮುಂದಾಗಬೇಕು ಎಂದು 2ನೇ ಹೆಚ್ಚುವರಿ ವ.ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಅಣ್ಣುಗೌಡ ಪಾಟೀಲ ಹೇಳಿದರು.
ಅವರು ಗುರುವಾರ ಮುಂಜಾನೆ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ 75ನೇ ಭಾರತ ಸ್ವಾತಂತ್ರ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಕಾನೂನು ಪ್ರಾದಿಕಾರ, ತಾಲೂಕು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾದಿಕಾರ ಮತ್ತು ವಕೀಲರ ಸಂಘ, ಕಂದಾಯ, ಶಿಕ್ಷಣ, ತಾ.ಪಂ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರೋಗ್ಯ , ಪೂಲೀಸ್ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳು ಆಯೋಜಿಸಿದ್ದ ಗ್ರಾಮೀಣ ಪ್ರದೇಶಗಳ ನಾಗರೀಕರಿಗೆ ಕಾನೂನು ಅರಿವು ನೆರವು ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1987 ಕಲಂ 4 (1)ರ ಅಡಿಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾದಿಕಾರವು ರಚನೆಯಾಗಿದ್ದು, ಜನರಲ್ಲಿ ಕಾನೂನು ಸಾಕ್ಷರತೆ ಮತ್ತು ಅರಿವನ್ನು ಮೂಡಿಸಲು ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಲ್ಲಿ ಸಮಾಜ ಕಲ್ಯಾಣ ಕಾಯ್ದೆಗಳು, ಕಾನೂನುಗಳು ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದ ನ್ಯಾಯಾಧೀಶರು ಸೇವಾ ಸಮಿತಿಗಳು ಅತ್ಯಂತ ಪರಿಣಾಮಕಾರಿಯಾಗಿ, ಜನರಿಗೆ ನ್ಯಾಯ ಒದಗಿಸುವಲ್ಲಿ ತನ್ನ ಪ್ರಾಮಾಣಿಕತೆ ಮೇರೆದು ಉದ್ದೇಶಿತ ಯೋಜನೆಯನ್ನು ಯಶಸ್ವಿಯಾಗುತ್ತಿರುವುದು ಸಂತೋಷ್ದ ಸಂಗತಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಿರಿಯ ವಿಭಾಗದ ದಿವಾಣಿ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಜೆ.ಯೋಗೇಶ ಅವರು ರಾಜ್ಯ ಪ್ರಾಧಿಕಾರವು ಸಮಾಜದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರಿಗೆ ನ್ಯಾಯ ದೂರಕಿಸುವ ಮಹತ್ವದ ಕಾರ್ಯದಲ್ಲಿ ತೂಡಗಿಸಿಕೂಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯದಿಂದ ವಂಚಿತರಾದ ಅನೇಕ ಕುಟುಂಬಗಳು ಇದ್ದಾರೆ ಅಂತಹ ಲಕ್ಷಾಂತರ ಜನರಿಗೆ ಇದರಿಂದ ಸಾಕಷ್ಟು ಪ್ರಯೋಜನ ವಾಗಲಿದೆ. ಬಡತನ ರೆಖೆಗಿಂತ ಕೆಳಗಿರುವ ನಾಗರೀಕರು ಯಾವೂದೇ ಆರ್ಥಿಕ ವೆಚ್ಚ ಭರಿಸದೆ ಸಂಪೂರ್ಣ ಉಚಿತವಾಗಿ ನ್ಯಾಯವನ್ನು ಪಡೆದು ಸಮಾಜದಲ್ಲಿ ಇತರರಂತೆ ಸಮಾನತೆಯಿಂದ ಜೀವನ ಸಾಗಿಸಬಹುದಾಗಿದೆ ಎಂದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಂತೆ ರಾಜ್ಯದಾದ್ಯಂತ ತಾಲೂಕು ಸಮಿತಿಯ ನ್ಯಾಯವಾಧಿಗಳು 2 ದಿವಸಗಳ ಕಾಲ ವಿವಿಧ ವಿಷಯಗಳ ಮೇಲೆ ಉಪನ್ಯಾಸ, ಸಭೆ, ಸಮಾರಂಭಗಳ ಮೂಲಕ ನಾಗರೀಕರಲ್ಲಿ ಕಾನೂನು ಅರಿವು ನೆರವನ್ನು ಜನ ಜಾಗೃತಿಗೂಳಿಸಲು ಮುಂದಾಗಿದ್ದೇವೆ ಎಂದ ಅವರು ತಾಲೂಕಿನ 108 ಗ್ರಾಮಗಳ ಪೈಕಿ 40 ಗ್ರಾಮ ಪಂಚಾಯತಿಗಳಲ್ಲಿ ಅರಿವು ಜಾಗೃತಿ ನಡೆಯಲಿದೆ ನಾಗರೀಕರು ಅಭಿಯಾನ ತಮ್ಮಲ್ಲಿ ಬಂದಾಗ ಸ್ವಾಗತಿಸಿ ಯಶಸ್ವಿಗೂಳಿಸುವುದರ ಜೋತೆಗೆ ಬಡವರ ಬದುಕಿಗೆ ನೆರವಾಗಬೇಕು ಮತ್ತು ಪ್ರಾದಿಕಾರದ ಉದ್ದೇಶಿತ ಯೋಜನೆ ಯಶಸ್ವಿಗೂಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಹಿರಿಯ ವಿಭಾಗದ ದಿವಾಣಿ ನ್ಯಾಯಾಧೀಶ ಜೆ.ವಿ ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್ ಬುರಡಿಕಟ್ಟಿ, ಉಪಾಧ್ಯಕ್ಷ ಕುಮಾರ ಮಡಿವಾಳರ, ಕಾರ್ಯದರ್ಶಿ ಜಿ.ಕೆ. ಮುಂಡಾಸದ, ಹೆಚ್.ಡಿ. ಹೂನ್ನಕ್ಕಳ್ಳವರ, ವಿಠ್ಠಲ್ ಪುಟಾಣಿಕರ, ಬಿ.ಆರ್. ಮಡಿವಾಳರ, ಹೆಚ್.ಎಸ್. ಸಿದ್ದಪ್ಪಳವರ, ಎಸ್.ಬಿ.ಶಿಗ್ಗಾವಿ, ಸಿ.ಯು.ಕರೆಗೌಡ್ರ, ಯು.ಎನ್.ಕೂನಬೇವು, ಎಂ.ಬಿ. ಜಾಡರ, ವಿ.ಎಂ. ಸಂದ್ಯಾಳ, ಸುಮಾ ಸಾವಕಾರ, ನಂದಿನಿ ಜೋಶಿ, ಅನುಪಮ ಕಣವಿ, ಸರಸ್ವತಿ ಕಮದೂಡ, ಜಯಶ್ರೀ ಜಂಬಗಿ, ಬಿ. ಅಂಜಲಿದೇವಿ, ಎಸ್.ಎನ್.ಕುಸಗೂರ, ನಾಗರತ್ನ ಮುಗಳಿಶೆಟ್ಟರ್, ಎಂ.ಡಿ. ಐರಣಿ, ಸೇರಿದಂತೆ ಮತ್ತಿತರ ನ್ಯಾಯವಾದಿಗಳು ಸೇವಾ ಸಮಿತಿಯ ಕಾರ್ಯಕರ್ತರು ಪಾಲ್ಗೂಂಡಿದ್ದರು.
ಇಂದಿನಿಂದ ಆರಂಭಗೂಂಡಿರುವ ಕಾನೂನು ಅರಿವು ನೆರವು ಜನ ಜಾಗೃತಿ ಜಾತಾ ಕೂಡಿಯಾಲ, ಕವಲೆತ್ತು, ಮುದೇನೂರ, ಮಾಕನೂರ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ, ಸೋಮಲಾಪುರ, ಗುಡ್ಡಗುಡ್ಡಾಪುರ, ಗುಡಗೂರ, ಹರನಗಿರಿ, ಚಿಕ್ಕಕುರವತ್ತಿ, ಲಿಂಗದಹಳ್ಳಿ, ಕುಪ್ಪೇಲೂರ, ತುಮ್ಮಿನಕಟ್ಟಿ, ಮಾಳನಾಯಕನ ಹಳ್ಳಿ, ನಿಟ್ಟೂರು, ಅಂತರವಳ್ಳಿ, ಹಲಗೇರಿ, ಬೆನಕನಕೂಂಡ ಸೇರಿದಂತೆ ಮತ್ತಿತರೆ ಪಂಚಾಯತಿ ವ್ಯಾಪ್ತಿಯಲ್ಲಿ ತನ್ನ ಅಭಿಯಾನದ ಮೂಲಕ ಜನರಲ್ಲಿ ಕಾನೂನಿನ ಜ್ಞಾನ ಅರಿವು ಮೂಡಿಸಲಿದೆ.