ಪೆಟ್ರೋಲ್ ಬೆಲೆ ನಿರಂತರ ಏರಿಕೆ, ಹೆಚ್ಚುತ್ತಿರುವ ಜನಾಕ್ರೋಶ
ನವದೆಹಲಿ, ಆಗುಸ್ಟ್ 23: ತೈಲ ಕಂಪನಿಗಳು ಕಳೆದ ಆರು ದಿನಗಳಿಂದ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಕೆಯಾಗಿದೆ ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, 17ರಂದು 16 ಪೈಸೆ, 18ರಂದು 17 ಪೈಸೆ, 20ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ಪೈಸೆ, 21ರಂದು 19 ಪೈಸೆ, ಇಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 16 ಪೈಸೆ ಹೆಚ್ಚಿಸಲಾಗಿದೆ. ಇದರಿಂದಾಗಿ ಒಟ್ಟು ಕಳೆದ 6 ದಿನಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 92 ಪೈಸೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಬೆಲೆ ಗಣನೀಯವಾಗಿ ಕುಸಿದಿದ್ದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಬಹಳ ಕಷ್ಟದಲ್ಲಿದ್ದಾರೆ ಜನತೆ ಹಾಗೂ ರಾಜಕೀಯ ನಾಯಕರು ಬೆಲೆ ಏರಿಕೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಕೇಂದ್ರ ಸರ್ಕಾರದ ತೈಲ ಕಂಪನಿಗಳು ಪೆಟ್ರೊಲ್ ಬೆಲೆ ಏರಿಸುತ್ತಿರುವುದು ಸಾರ್ವಜನಿಕ ವಲಯದಲ್ಲೂ ಆಕ್ರೋಶ, ಅಸಮಾಧಾನ ಸಹ ಹೆಚ್ಚಳವಾಗುತ್ತಿದೆ.