ಚಿಕ್ಕೋಡಿ

ಸಹಕಾರಿ ಸಂಘಗಳು ಬೆಳವಣಿಗೆಗೆ ಜನರ ನಂಬಿಕೆ, ವಿಶ್ವಾಸ ಮುಖ್ಯ: ಲೋಕರೆ

ಸಹಕಾರಿ ಸಂಘಗಳು ಬೆಳವಣಿಗೆಗೆ ಜನರ ನಂಬಿಕೆ, ವಿಶ್ವಾಸ ಮುಖ್ಯ: ಲೋಕರೆ

ಮಾಂಜರಿ 23: ಜನರ ನಂಬಿಕೆ, ವಿಶ್ವಾಸ ಪ್ರೀತಿಯನ್ನು ಗಳಿಸಿದಾಗ ಮಾತ್ರ ಸಹಕಾರಿ ಸಂಘಗಳು ಬೆಳೆಯಲು ಸಾಧ್ಯ ಎಂದು ಮಾಂಜರಿ ಗ್ರಾಮದ ವಿಧೋದ್ದೇಶ ಪ್ರಾಥಮಿಕ  ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಮೋಹನ್ ಲೋಕರೆ ಹೇಳಿದರು.  

ಅವರು ಸೋಮವಾರದಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ವಿವಿಧದ್ದೇಶಗಳ  ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ  ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಸಂಘದ ಎಲ್ಲ ಸದಸ್ಯರು ತಮ್ಮ ಅಳಿಲು ಸೇವೆ ಸಲ್ಲಿಸಿದ್ದರ ಪರಿಣಾಮ ವರ್ಷದಿಂದ ವರ್ಷಕ್ಕೆ ಲಾಭಾಂಶದಲ್ಲಿ ದ್ವಿಗುಣವಾಗಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಸಂಘದ ಸದಸ್ಯರುಗಳು ವಿಶ್ವಾಸದಾಯಕಮನೋಭಾವನೆ ಹೊಂದಿರಬೇಕು ಮತ್ತು ಸಿಬ್ಬಂದಿ ಗ್ರಾಹಕರೊಂದಿಗೆ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಬೇಕು. ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಈ ಅವಧಿಯಲ್ಲಿ ಸಂಘದ ಅಭಿವೃ ದ್ಧಿಗೆ ನಾವು ಸಾಕಷ್ಟು ಶ್ರಮಿಸಿ ದ್ದೇವೆ. ಸಂಘವು ಅಭಿವೃದ್ಧಿ ಹೊಂದಲು ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಬೇಕು. ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಅಭಿವೃದ್ಧಿಗೋಸ್ಕರ  ಆಡಳಿತ ಮಂಡಳಿಯ ಸದಸ್ಯರಿಗೆ ಸಹಕಾರ ಅತ್ಯವಶ್ಯವಾಗಿದೆ ಎಂದರು.  

ಸಂಘದ ಉಪಾಧ್ಯಕ್ಷ ಪಾಂಡುರಂಗ ಮನೆ ಮಾತನಾಡಿ ತಾಲೂಕಿನ ಒಂದು ಆದರ್ಶ ಸಹಕಾರಿ ಸಂಘ ವಾಗಿದ್ದು ಸಹಕಾರಿ ಸಂಘದ ಎಲ್ಲ ಸದಸ್ಯರ ಈ ವರ್ಷ ಯಾವುದೇ ರಾಜಕಾರಣ ಮಾಡದೆ ಸಹಕಾರಿ  ಸಂಘದ ಆಡಳಿತ ಮಂಡಳಿಯ ಚುನಾವಣೆಯನ್ನು ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು. 

ಸಂಘದ ವರದಿಯ ವಾಚನವನ್ನು ಕಾರ್ಯನಿರ್ವಾಹಕ ಅಧಿಕಾರಿ ಪಾಂಡುರಂಗ ಕುಲಕರ್ಣಿ ಓದಿ  ಹೇಳಿದರು. ಈ ವರ್ಷ ಸಂಘಕ್ಕೆ ಆರ್ಥಿಕ ವರ್ಷದಲ್ಲಿ 51 ಲಕ್ಷ ಗಳಿಸಲಾಗಿದ್ದು ಸದಸ್ಯರಿಗೆ ಪ್ರತಿಶತ 15ರಂತೆ ಲಾಭಾಂಶ ನೀಡಲಾಗುವುದೆಂದು ಅವರು ಘೋಷಿಸಿದರು. ಸಂಘದ ನಿರ್ದೇಶಕರಾದ ಪರಶುರಾಮ್ ಪವಾರ,  ದಾದಾಸಾಹೇಬ್ ಭೋಜಕರ, ಜ್ಯೋತಿ ರಾಮ ಯಾದವ್, ಬಾಬಾ ಸಾಹೇಬ್ ಕೋಥಳಿ, ರಾಮು ಕಾಸಾಯಿ, ಸುಭಾಷ ನರವಾಡೇ, ಮಾಯಾ ಬಿಲವಡೆ, ಸುವರ್ಣ ಚವಾನ್, ಮಾಲುತಾಯಿ ಪಾಟೋಳೆ ಹಾಗೂ ಇನ್ನುಳಿದ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು. ಸುದತ್ತ ಮಗನ್ನವರ್ ಸ್ವಾಗತಿಸಿ, ಬಾಬಾ ಸಾಹೇಬ್ ಗಣೇಶವಾಡಿ ವಂದಿಸಿದರು. 


ಸುದ್ದಿ ಓದಿ