ಜನಪದ ಬದುಕು, ಸಂಸ್ಕೃತಿಯುವ ಪೀಳಿಗೆಗೆ ಮಾರ್ಗದಾಯಿಯಾಗಬೇಕಿದೆ: ಸುಮಂಗಲಾ
ಲೋಕದರ್ಶನ ವರದಿ
ಶಿಗ್ಗಾವಿ 08: ಜಾನಪದ ಹಾಡು ಹಾಗೂ ನಮ್ಮಜನಪದ ಬದುಕು ಮತ್ತು ಸಂಸ್ಕೃತಿಯುವ ಪೀಳಿಗೆಗೆ ಮಾರ್ಗದಾಯಿಯಾಗಬೇಕಿದೆ. ಪ್ರತಿಯೊಬ್ಬರು ನಮ್ಮ ಸಂಸ್ಕೃತಿಯನ್ನುಅರಿತು ಮೈಗೂಡಿಸಿಕೊಂಡು ಬದುಕಬೇಕು ಅಂದಾಗ ಮಾತ್ರ ಸೌಹಾರ್ಧಯುತ ಸಮಾಜ ನಿರ್ಮಾಣ ಸಾದ್ಯವಾಗಲಿದೆ ಎಂದು ಜಾನಪದ ವಿಶ್ವವಿದ್ಯಾಲಯದ ಡಾ.ಸುಮಂಗಲಾ ಅತ್ತಿಗೇರಿ ಹೇಳಿದರು.
ಪಟ್ಟಡಣದ ಚನ್ನಪ್ಪಕುನ್ನೂರ ಪದವಿ ಪೂರ್ವಕಾಲೇಜಿನಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಂಗಮ್ಮ ಹುಚ್ಚೇಗೌಡ ದತ್ತಿಪ್ರಶಸ್ತಿ ಪುರಸ್ಕೃತೆ ಜಾನಪದ ಗಾಯಕಿ ಸಾವಕ್ಕ ಓಲೇಕಾರ ಇವರ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಜನರು ಕುರಿತೋದದೆ ಕಾವ್ಯಪ್ರಯೋಗ ಪರಿಣಿತಮತಿಗಳು ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯವಿದೆ. ಎಲೆಯಮರೆಯಕಾಯಿಯಂತಿರುವ ಸಾವಕ್ಕ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿದ್ದು ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಗೌರವ ಸನ್ಮಾನ ಸ್ವೀಕರಿಸಿದ ಸಾವಕ್ಕ ಓಲೇಕಾರ ಸೋಬಾನ ಪದ, ಜೋಗುಳ ಪದ, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೆ.ಎಸ್. ಬರದೇಲಿ, ಎಂ.ಎಸ್. ಕುರಂದವಾಡ, ಕೆ. ಸಿ. ಹೂಗಾರ, ಅನ್ನಪೂರ್ಣ ಅಂಕಲಕೋಟಿ, ಗೀತಾ ಸಾಲ್ಮನಿ, ಸುಮಿತ್ರಾ ರಾಮಾಪೂರಮಠ ಮುಂತಾದವರು ಇದ್ದರು. ಪ್ರಾರಂಭದಲ್ಲಿ ಎಂ. ಎಸ್. ಕುರಂದವಾಡ ಸ್ವಾಗತಿಸಿದರು. ಗೀತಾ ಸಾಲ್ಮನಿ ನಿರೂಪಿಸಿದರು. ಮಹೇಶ ಲಕ್ಷ್ಮೇಶ್ವರ ವಂದಿಸಿದರು