ಶಿಗ್ಗಾವ್

ಜನಪರ ಅಭಿವೃದ್ಧಿ ಮತ್ತು ಬಿಜೆಪಿ ಕಾರ್ಯಕರ್ತರ ನಿರಂತರ ಪರಿಶ್ರಮ ಬೊಮ್ಮಾಯಿ ಗೆಲುವಿಗೆ ಶ್ರೀರಕ್ಷೆ: ಮ್ಯಾಗೇರಿ

ಜನಪರ ಅಭಿವೃದ್ಧಿ ಮತ್ತು ಬಿಜೆಪಿ ಕಾರ್ಯಕರ್ತರ ನಿರಂತರ ಪರಿಶ್ರಮ ಬೊಮ್ಮಾಯಿ ಗೆಲುವಿಗೆ ಶ್ರೀರಕ್ಷೆ: ಮ್ಯಾಗೇರಿ

ಲೋಕದರ್ಶನ ವರದಿ 

ಶಿಗ್ಗಾವಿ : ಬಸವರಾಜ ಎಸ್ ಬೊಮ್ಮಾಯಿ ಅವರ ಗೆಲುವಿಗೆ ಅವರು ಮಾಡಿದ ಜನಪರ ಅಭಿವೃದ್ಧಿ ಮತ್ತು ಬಿಜೆಪಿ ಕಾರ್ಯಕರ್ತರ ನಿರಂತರ ಪರಿಶ್ರಮ ಅತಿ ಹೆಚ್ಚು ಮತಗಳ ಗೆಲುವಿಗೆ ಕಾರಣ ಆಗಿದೆ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಬೊಮ್ಮಾಯಿಯವರು ಅಂದರೆ ಅದೊಂದು ಅಭಿವೃದ್ಧಿಯ ಶಕ್ತಿ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಅಂತ್ಯೋದಯ ಪರಿಕಲ್ಪನೆ ಸರ್ವ ಸಮುದಾಯ ಮುಖಂಡರ ಜೊತೆ ನಿಕಟ ಬಾಂಧವ್ಯ ಜಾತ್ಯಾತೀತ ಭಾವ ನೀತಿಯ ಆಡಳಿತ ಸರ್ವ ಸಮುದಾಯಗಳ ಅಭಿವೃದ್ಧಿಯ ಸದಾ ಚಟುವಟಿಕೆ ಸಮುದಾಯ ಭವನಗಳ ನಿರ್ಮಾಣ ಕೊಟ್ಟ ಮಾತಿನಂತೆ ನಡೆದುಕೊಂಡ ರೀತಿ ನೀತಿ. ಅನೇಕ ಕೈಗಾರಿಕೆಗಳ ಸ್ಥಾಪನೆಯೊಂದಿಗೆ ನಿರುದ್ಯೋಗಗಳಿಗೆ ಉದ್ಯೋಗ ಕಲ್ಪಿಸುವ ಸಂಕಲ್ಪ. ಮೂಲಭೂತ ಸೌಕರ್ಯಕ್ಕೆ ಸದಾ ಒತ್ತು ರಸ್ತೆ. ಸಾರಿಗೆ. ವಿದ್ಯುತ್‌. ನೀರು. ಆಸ್ಪತ್ರೆ ಸೇರಿದಂತೆ ಮೂಲಭೂತ ಸೌಕರ್ಯ ಕ್ಕೆ ಹೆಚ್ಚಿನ ಒತ್ತು ಸರ್ವತೋಮುಖ ಅಭಿವೃದ್ಧಿ.ಕೇಂದ್ರ ರಾಜ್ಯ ಸರಕಾರಗಳ ಯೋಜನೆಗಳನ್ನು ಜನರಿಗೆ ನಿರಂತರವಾಗಿ ಸಭೆ ಹಾಗೂ ಪ್ರಚಾರದ ಮೂಲಕ ಜನಮನಕ್ಕೆ ಮುಟ್ಟಿಸಿದ್ದು ಪ್ರಚಂಡ ಬಹುಮತಕ್ಕೆ ಮೂಲ ಕಾರಣವಾಗಿ ಸೋಲಿಲ್ಲದ ಸರದಾರ . 

ಅಭಿವೃದ್ಧಿಯ ಹರಿಕಾರನೆಂದು ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಬಿರುದು ನಾಡಿನ ಜನತೆ ಕೊಟ್ಟಿದ್ದು ಸಾರ್ಥಕವಾಯಿತು. ನಮ್ಮ ಕ್ಷೇತ್ರದ ಹೆಸರು ನಾಡಿಗೆ ಪರಿಚಯವಾಯಿತು. ಬೊಮ್ಮಾಯಿ ಅವರನ್ನು ನಾಲ್ಕು ಬಾರಿ ಆಯ್ಕೆ ಮಾಡಿದ ಮತದಾರರ ಭಾವ ತುಂಬಿದ ಪ್ರೀತಿ ಮತ್ತು ಪ್ರೇಮ ಹೊಸ ಇತಿಹಾಸ ನಿರ್ಮಾಣ ಮಾಡಿತು ಸಾಮಾಜಿಕ ಕಳಕಳಿ. ಅಭಿವೃದ್ಧಿ. ಜನ ಸಂಪರ್ಕ. ನಿರಂತರ ಸೇವೆಯಲ್ಲಿ ಪಾಲ್ಗೊಂಡವರನ್ನು ಎಂದೂ ಸೋಲಲು ಬಿಡುವುದಿಲ್ಲ ಎಂಬ ಸಂದೇಶವನ್ನು ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ಜನನಾಯಕರಾಗುವವರಿಗೆ ಕೊಟ್ಟಿರುವುದು ಸಂತೋಷ ತಂದಿದೆ ಎಂದರು. 


ಸುದ್ದಿ ಓದಿ