ಪೀಪಲ್ಸ ಮಲ್ಟಿಪರಪಜ್ ಸೊಸಾಯಟಿ ಲಾಭಗಳಿಸಿ ಮುನ್ನಡೆ: ಗಡೆಕಾಯಿ
ಲೋಕದರ್ಶನ ವರದಿ
ಸಂಕೇಶ್ವರ 11: ಸಂಕೇಶ್ವರ ಪೀಪಲ್ಸ ಮಲ್ಟಿಪರಪಜ್ ಕೋ-ಆಪ್ ಸೊಸಾಯಟಿಯ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತೀಚಿಗೆ ಈ ಸಂಸ್ಥೆಯ ಸಂಸ್ಥಾಪಕರು ಹಾಗೂ ಸೊಸಾಯಟಿಯ ಅಧ್ಯಕ್ಷ ಪ್ರಕಾಶ ಗಂಗಾಧರಪ್ಪಾ ಕಣಗಲಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಸೊಸಾಯಟಿಯ ಹಿರಿಯ ನಿರ್ದೇಶಕಿ ಶಹನಾಜ ಗಡೇಕಾಯಿ ಇವರು ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಸಂಘದಲ್ಲಿ ಸಾಲ ಪಡೆದುಕೊಂಡಿರುವಂತಹ ಸಾಲಗಾರರ ಸದಸ್ಯರು ನಿಗದಿತ ಅವಧಿಯಲ್ಲಿ ಸಾಲದ ಮರುಪಾವತಿ ಮಾಡುತ್ತಿರುವುದು ಅವರ ಪ್ರಾಮಾಣಿಕತೆಯು ಸಂಘದ ಉನ್ನತಿಗೆ ಸಹಕಾರಿಯಾಗಿದೆ. ಈ ಸಂಘದ ವಹಿವಾಟದ ಕಾರ್ಯವ್ಯಾಪ್ತಿಯು ಹುಕ್ಕೇರಿ ತಾಲೂಕಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದರು. ಸೊಸಾಯಟಿಯು ಪ್ರಸಕ್ತ ಸಾಲಿನಲ್ಲಿ ಸುಮಾರು 9.5 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಲಾಭಾಂಶದಿಂದ ಶೇ.10 ರಷ್ಟು ಡಿವಿಡೆಂಡ ನೀಡಲಿದೆ ಎಂದು ಗಡೆಕಾಯಿ ಹೇಳಿದರು.
ಈ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರ ಕಷ್ಟ ಕಾರ್ಪಣ್ಯಗಳನ್ನು ಅರಿತು ಪ್ರಾಮಾಣಿಕವಾಗಿ ಸಾಲ ತುಂಬಿದ ಸದಸ್ಯರಿಗೆ ತ್ವರಿತವಾಗಿ ಸಾಲಗಳನ್ನು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ನಮ್ಮ ಸಂಘದ ಹಿತಚಿಂತಕರಾದ ಪವನ ಕಣಗಲಿ, ಇವರು ಮೇಲಿಂದ ಮೇಲೆ ಮಾರ್ಗದರ್ಶನ ನೀಡುತ್ತಿರುವುದು ನಮ್ಮ ಸದಸ್ಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಗಡೆಕಾಯಿಯವರು ಹೇಳಿದರು,
ಸೊಸಾಯಟಿಯ ಸದಸ್ಯರ ಸಂಖ್ಯೆ 685 ಇದ್ದು ಠೇವುಗಳು 3,76,93,426.00 ಇದ್ದು 3 ಕೋಟಿ ಮೇಲ್ಪಟ್ಟು ಸದಸ್ಯರಿಗೆ ಸಾಲಗಳನ್ನು ನೀಡಿದ್ದು ಇರುತ್ತದೆ, ದುಡಿಯುವ ಬಂಡವಾಳ 4,76,43,329.00 ಇರುತ್ತದೆ, ಸಾಲದ ವಸೂಲಾತಿಯು ಗಣನೀಯವಾಗಿದೆ.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ಯಾಮಲಿಂಗ ಹಾಲಟ್ಟಿ ಸಂಘದ ವರದಿ ವಾಚಿಸಿದರು. ಸಮಾರಂಭದಲ್ಲಿ ಉಪಾಧ್ಯಕ್ಷ ಚಿದಾನಂದ ಇಂಡಿ, ನಿರ್ದೇಶಕ ಸೂರ್ಯಕಾಂತ ಖಾಡೆ, ಸುರೇಶ ನಾಯಿಕ, ಸುಮಲತಾ ಕಣಗಲಿ, ಸಚಿನ ಸಪಾಟೆ, ಸಾಗರ ಗೋಂಧಳಿ, ಶೀತಲ ಚೋರಗೆ, ಶಿವಗೌಡಾ ಪಾಟೀಲ, ಆನಂದ ಹಾಲದೇವರಮಠ ಉಪಸ್ಥಿತರಿದ್ದರು