ಶಾಂತಿಯುತವಾಗಿ ಗ್ರಾ.ಪಂ. ಉಪಚುನಾವಣೆ
ಲೋಕದರ್ಶನ ವರದಿ
ಬೈಲಹೊಂಗಲ 28: ತಾಲೂಕಿನ ಬೆಳವಡಿ, ವಕ್ಕುಂದ ಗ್ರಾಮಗಳಲ್ಲಿ ಗ್ರಾ.ಪಂ. ಉಪಚುನಾವಣೆ ಶಾಂತಿಯುತವಾಗಿ ಸೋಮವಾರ ಜರುಗಿತು.
ಮತದಾನ ಕೇಂದ್ರಕ್ಕೆ ತಹಶೀಲ್ದಾರ ಬಸವರಾಜ ನಾಗರಾಳ, ತರಬೇತುದಾರ ಬಸವರಾಜ ಭರಮನ್ನವರ ಭೇಟಿ ನೀಡಿ ಪರೀಶಿಲಿಸಿದರು. ಬೆಳವಡಿ ವಾರ್ಡ ನಂ.2 ಶೇ.63.36 , ವಕ್ಕುಂದ ವಾರ್ಡ ನಂ.4 ಶೇ. 78.81 ರಷ್ಟು ಮತದಾನ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಫಲಿತಾಂಶ ಡಿ.30 ರಂದು ಹೊರಬೀಳಲಿದೆ.